ಸರ್ವವ್ಯಾಪಿ ಭಗವಂತನಿಗೆ ನಿರ್ದಿಷ್ಟ ಸ್ಥಳದ ಅಗತ್ಯವಿಲ್ಲ : ಮದ್ರಾಸ್ ಹೈಕೋರ್ಟ್

ಚೆನ್ನೈ,ಜ.29- ದೇವರು ಸರ್ವಂತ್ರಯಾಮಿ. ಅವನಿಗೆ ರ್ನಿಧಿಷ್ಟ ಸ್ಥಳದ ಅಗತ್ಯವಿಲ್ಲ. ಮತಾಂಧರು ಧರ್ಮದ ಹೆಸರಿನಲ್ಲಿ ಜನರನ್ನು ಒಡೆದು ಸಮಸ್ಯೆಗಳನ್ನು ಉಂಟು ಮಾಡುತ್ತಾರೆ ಎಂದು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಸಾರ್ವಜನಿಕ ಭೂಮಿಯಲ್ಲಿರುವ ದೇವಸ್ಥಾನ ತೆರುವುಗೊಳಿಸುವುದನ್ನು ತಡೆಯಬೇಕೆಂದು ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವೈದ್ಯನಾಥನ್ ಮತ್ತು ಡಿ. ಭರತ ಚಕ್ರವರ್ತಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ರೀತಿ ಅಭಿಪ್ರಾಯಪಟ್ಟಿದೆ. ದೇವಸ್ಥಾನವನ್ನು ಸ್ಥಾಪಿಸುವ ನೆಪದಲ್ಲಿ, ಧರ್ಮ, ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಸಾರ್ವಜನಿಕ ಬಳಕೆಗಾಗಿ ಉದ್ದೇಶಿಸಲಾದ ಹೆದ್ದಾರಿ ಆಸ್ತಿಯನ್ನು […]