ಜನ ಸಾಮಾನ್ಯರ ಮೇಲೆ ಹೊರೆಯಾಗದಂತೆ ಆರ್ಥಿಕತೆ ಶಿಸ್ತು ಕಾಪಾಡಿಕೊಳ್ಳುತ್ತೇವೆ ; ನಿರ್ಮಲಾ

ನವದೆಹಲಿ, ಫೆ.11- ಕೋವಿಡ್‍ನಿಂದಾಗಿ ಜಾಗತಿಕ ಆರ್ಥಿಕ ಹಿಂಜರಿಕೆಯಾಗಿದ್ದು, ಸವಾಲಿನ ಸಂದರ್ಭವನ್ನು ಜನಸಾಮಾನ್ಯರಿಗೆ ಹೊರೆಯಾಗದಂತೆ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ ಮತ್ತು ಶಿಸ್ತುಬದ್ಧ ಆರ್ಥಿಕತೆಯನ್ನು ಕಾಪಾಡಿಕೊಳ್ಳುತ್ತೇವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಬಜೆಟ್ ಕುರಿತು ರಾಜ್ಯಸಭೆಯಲ್ಲಿಂದು ನಡೆದ ಚರ್ಚೆಗೆ ಉತ್ತರ ನೀಡಿದ ಸಚಿವರು, 2008-09ರಲ್ಲಿ ಆರ್ಥಿಕ ಹಿಂಜರಿಕೆಯಾಗಿತ್ತು. ದೇಶದಲ್ಲಿ 2.12 ಲಕ್ಷ ಕೋಟಿ ಮೌಲ್ಯದ ಜಿಡಿಪಿ ನಷ್ಟವಾಗಿತ್ತು. ಆದರೆ, ಹಣದುಬ್ಬರದ ಪ್ರಮಾಣ ಶೇ.9.1ರಷ್ಟು ಹೆಚ್ಚಳವಾಗಿ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದರು. ಕೋವಿಡ್‍ನಿಂದಾಗಿ 2020ರಿಂದ ಈವರೆಗೂ […]