ಚೀನಾದಿಂದ ಭಾರತೀಯ ಬಾಲಕನ ಅಪಹರಣ..?

ನವದೆಹಲಿ,ಜ.20- ಚೀನಾದ ಭಾಗದಲ್ಲಿ ಕಾಣೆಯಾಗಿರುವ ಬಾಲಕ ಮಿರಾಮ್ ತರೋನ್ ಅನ್ನು ಪತ್ತೆ ಮಾಡಲು ಮತ್ತು ಅವನನ್ನು ಸ್ಥಾಪಿತ ಶಿಷ್ಟಾಚಾರಗಳ ಪ್ರಕಾರ ವಾಪಸ್ ಕರೆತರುವ ನಿಟ್ಟಿನಲ್ಲಿ ಭಾರತೀಯ ಸೇನೆಯು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ)ಯ ನೆರವು ಕೋರಿದೆ ಎಂದು ಸೇನೆಯ ಮೂಲಗಳು ಇಂದು ತಿಳಿಸಿವೆ. ಭಾರತೀಯ ಪ್ರದೇಶದ ಅರುಣಾಚಲ ಪ್ರದೇಶದ ಮೇಲಣ ಸಿಯಾಂಗ್ ಜಿಲ್ಲೆಯಿಂದ ಮಂಗಳವಾರ ಪಿಎಲ್‍ಎ 17 ವರ್ಷದ ಬಾಲಕನನ್ನು ಅಪಹರಿಸಿದೆ ಎಂದು ಅರುಣಾಚಲ ಪ್ರದೇಶದ ಸಂಸದ ತಾಪಿರ್ ಗಾವ್ ಬುಧವಾರ ಹೇಳಿದ್ದರು. ತರೋನ್ ಬಗ್ಗೆ […]