ಶಾಲಾ ಬಾಲಕಿ ಆತ್ಮಹತ್ಯೆ ಪ್ರಕರಣ, ಸಿಬಿಐ ವಿಚಾರಣೆಗೆ ಸುಪ್ರಿಂ ಸಮ್ಮತಿ
ನವದೆಹಲಿ,ಫೆ.14- ತಮಿಳು ನಾಡಿನಲ್ಲಿ 17 ವರ್ಷ ವಯಸ್ಸಿನ ಶಾಲಾ ಬಾಲಕಿಯ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ತನಿಖೆಯ ವಿರುದ್ಧ ಸಲ್ಲಿಸಿದ ಪೊಲೀಸರ ಮನವಿಯ ವಿಚಾರಣೆ ನಡೆಸಲು ಸುಪ್ರೀಂಕೋಟ್ ್ ಸಮ್ಮತಿಸಿದೆ. ಆದರೆ ಈ ವಿದ್ಯಾರ್ಥಿನಿಯನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಲು ಬಲವಂತ ಮಾಡಲಾಗಿತ್ತು ಎಂಬ ಆರೋಪದ ಪ್ರಕರಣದಲ್ಲಿ ಸಿಬಿಐ ತನಿಖೆ ಮುಂದುವರೆಸಬಹುದು ಎಂದು ನ್ಯಾಯಾಲಯ ತಿಳಿಸಿದೆ. ಹರಿಹರೆಯದ ಬಾಲಕಿ ಜನವರಿ 9ರಂದು ತಾಂಜಾವೂರಿನ ತನ್ನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು ಮತ್ತು 10 ದಿನಗಳ ಬಳಿಕ ಮೃತಪಟ್ಟಳು. […]