ಫೆಬ್ರವರಿಗೂ ಶಾಲೆ-ಕಾಲೇಜು ಬಂದ್ ಮಾಡುವುದು ಸೂಕ್ತ : ಹೆಚ್‌ಡಿಕೆ

ಬೆಂಗಳೂರು,ಜ.18- ಕೋವಿಡ್ 3ನೇ ಅಲೆ ತೀವ್ರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿಗೂ ಶಾಲೆ, ಕಾಲೇಜು ಹಾಸ್ಟೆಲ್‍ಗಳನ್ನು ಬಂದ್ ಮಾಡುವುದು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾತ್ರಿ ಕಫ್ರ್ಯೂನಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಇದರಿಂದ ಕೆಲವರಿಗೆ ಅನಾನುಕೂಲವಾಗಿದೆ. ಅಂಥವರಿಗೆ ರಿಯಾಯ್ತಿ ನೀಡಬೇಕು. ನೈಟ್ ಕರ್ಫ್ಯೂ ಜಾರಿ ಅವಶ್ಯಕತೆ ಇಲ್ಲ ಎಂದರು. ವೀಕೆಂಡ್ ಕರ್ಫ್ಯೂನಿಂದ ಕೆಲವರಿಗೆ ಕಷ್ಟವಾಗಿದೆ. ಅಂಥವರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಮಯ ನಿಗದಿಪಡಿಸಬೇಕು […]