ನೈಟ್ ಕಫ್ರ್ಯೂ ಮುಂದುವರೆಯಲಿದೆ, ಶಾಲಾ -ಕಾಲೇಜು ಬಂದ್ ಅಗತ್ಯ: ಗೃಹ ಸಚಿವ

ಚಿಕ್ಕಮಗಳೂರು,ಜ.3-ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಕಫ್ರ್ಯೂವನ್ನು ಮುಂದುವರೆ ಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾತ್ರಿ ಕಫ್ರ್ಯೂವನ್ನು ಜಾರಿಗೊಳಿಸಲಾಗುತ್ತಿದೆ. ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಮತ್ತಷ್ಟು ದಿನ ರಾತ್ರಿ ಕಫ್ರ್ಯೂ ಮುಂದುವರೆಯಲಿದೆ. ಸರ್ಕಾರದ ಜತೆ ಸಾರ್ವಜನಿಕರು ಕೈ ಜೋಡಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಇಲ್ಲದಿದ್ದರೆ ಲಾಕ್‍ಡೌನ್ ಅನಿವಾರ್ಯವಾಗಬಹುದು ಎಂದರು. ಸದ್ಯಕ್ಕೆ ಲಾಕ್‍ಡೌನ್ ಮಾಡುವ ಉದ್ದೇಶ ಇಲ್ಲ. ಅನಿವಾರ್ಯವಾದರೆ ಮಾಡಬೇಕಾಗಬಹುದು. ಜನರ ಜೀವ ಉಳಿಸಲು […]