ಜಿಎಸ್‍ಟಿ ಯುಗಾರಂಭದ ನಂತರ 2ನೇ ಬಾರಿಗೆ 1.50 ಲಕ್ಷ ಕೋಟಿ ಮೀರಿದ ಆದಾಯ ಸಂಗ್ರಹ

ನವದೆಹಲಿ, ನ.1- ಜಿಎಸ್‍ಟಿ ಯುಗ ಆರಂಭವಾದ ನಂತರ ಎರಡನೇ ಬಾರಿಗೆ ದೇಶದ ತೆರಿಗೆ ಸಂಗ್ರಹದಲ್ಲಿ 1.50 ಲಕ್ಷ ಕೋಟಿ ಮೀರಿದ ಆದಾಯ ವಸೂಲಿಯಾಗಿದೆ. ಕೇಂದ್ರ ಹಣಕಾಸು ಇಲಾಖೆ ಬಿಡುಗಡೆ ಮಾಡಿರುವ ಅಕ್ಟೋಬರ್ ತಿಂಗಳ ತೆರಿಗೆ ಸಂಗ್ರಹ ಮಾಹಿತಿಯ ಪ್ರಕಾರ ಕಳೆದ ಮಾಸಿಕದಲ್ಲಿ 1,51,718 ಕೋಟಿ ರೂಪಾಯಿ ಜಿಎಸ್‍ಟಿ ವಸೂಲಿಯಾಗಿದೆ. ಕಳೆದ ಏಪ್ರಿಲ್ ಬಳಿಕ ಇದು ಎರಡನೇ ಹೆಚ್ಚು ಸಂಗ್ರಹಿತ ಆದಾಯವಾಗಿದೆ. ಕಳೆದ ಎಂಟು ತಿಂಗಳಿನಿಂದಲೂ 1.40 ಲಕ್ಷ ಕೋಟಿ ರೂಪಾಯಿ ಆಜುಬಾಜಿನಲ್ಲೇ ತೆರಿಗೆ ಸಂಗ್ರಹವಾಗುತ್ತಿತ್ತು. ಜಿಎಸ್‍ಟಿ ಶುರುವಾದ […]