ಶಿವರಾತ್ರಿ ನಂತರ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ..?

ಬೆಂಗಳೂರು, ಜ.25-ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಮಹಾಶಿವರಾತ್ರಿ ಹಬ್ಬದದೊಳಗೆ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ 93 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದ ಜೆಡಿಎಸ್ ಈಗ ಎರಡನೇ ಹಂತದಲ್ಲಿ ಸುಮಾರು 60 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಇನ್ನೆರಡು ವಾರದಲ್ಲಿ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ತೀವ್ರ ಕುತೂಹಲ ಕೆರಳಿಸಿರುವ ಹಾಸನ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಹಾಸನ, ಅರಕಲಗೂಡು ಹಾಗೂ ಅರಸೀಕೆರೆ ವಿಧಾನಸಭಾ […]

ರಣಜಿ ಟೂರ್ನಿಯಲ್ಲಿ ವೇಗದ ತ್ರಿಶತಕ ಗಳಿಸಿದ ಪೃಥ್ವಿ ಶಾ

ಗುವಾಹಟಿ, ಜ. 11- ಅಂಡರ್ 19 ವಿಶ್ವಕಪ್ ವಿಜೇತ ನಾಯಕ ಪೃಥ್ವಿ ಶಾ ಅವರು ರಣಜಿ ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿದ್ದು, ಅಸ್ಸಾಮ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಚೊಚ್ಚಲ ತ್ರಿಶತಕ ಗಳಿಸಿ ಗಮನ ಸೆಳೆದಿದ್ದಾರೆ. ಗುವಾಹಟಿಯ ಅಮಿಂಗೋನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 326 ಎಸೆತಗಳನ್ನು ಎದುರಿಸಿದ ಪೃಥ್ವಿ ಶಾ 300 ರನ್‍ಗಳನ್ನು ದಾಖಲಿಸುವ ಮೂಲಕ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಯ್ಕೆ ಆಗುವ ಸೂಚನೆ ನೀಡಿದ್ದಾರೆ. ಫೆಬ್ರವರಿ 9 ರಿಂದ ನಾಗ್ಪುರದಲ್ಲಿ […]

ದೇಶದಲ್ಲೇ ಮೈಸೂರು ಮೃಗಾಲಯಕ್ಕೆ 2ನೇ ಸ್ಥಾನ

ಮೈಸೂರು,ಸೆ.16- ಭಾರತದಲ್ಲಿನ ಮೃಗಾಲಯಗಳ ನಿರ್ವಹಣೆಯ ಪರಿಣಾಮಕಾರಿ ಮೌಲ್ಯಮಾಪನದಲ್ಲಿ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯವು ಒಟ್ಟಾರೆ ವಿಭಾಗದಲ್ಲಿ ಮೂರನೇ ಸ್ಥಾನ ಮತ್ತು ದೊಡ್ಡ ಮೃಗಾಲಯ ವಿಭಾಗದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ನಿರ್ವಹಣೆ, ಸ್ವಚ್ಛತೆ, ಪ್ರಾಣಿಗಳ ಎರವಲು ಪ್ರವಾಸಿಗರ ಆಕರ್ಷಣೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ನಡೆದಿರುವ ಮೌಲ್ಯಮಾಪನದಲ್ಲಿ ದೊಡ್ಡ ಮೃಗಾಲಯಗಳ ವಿಭಾಗದಲ್ಲಿ ತಮಿಳುನಾಡಿನ ಅರಿಗ್ನಾರ್ ಅಣ್ಣ ಜಿಯಾಲಾಜಿಕಲ್ ಪಾರ್ಕ್ ಶೇ.80ರಷ್ಟು ಅಂಕಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯವು ಎರಡನೇ ಸ್ಥಾನದಲ್ಲಿದೆ. ಗುಜರಾತ್‍ನ ಸಕ್ರ್ಕರ್‍ಬಾಗ್ ಜಿಯಾಲಾಜಿಕಲ್ […]

ನಾಳೆಯಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ

ಬೆಂಗಳೂರು,ಆ.11- ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ನಾಳೆಯಿಂದ ಆ.25ರವರೆಗೆ ಪೂರಕ ಪರೀಕ್ಷೆಯನ್ನು ನಡೆಸಲಿದೆ. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು, ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯುವ ದಿನಾಂಕಗಳಲ್ಲಿ ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಉಚಿತ ಬಸ್ ಸೌಲಭ್ಯವನ್ನು ಕೆಎಸ್ಆರ್‌ಟಿಸಿ ಕಲ್ಪಿಸಲಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳುವಾಗ ಮತ್ತು ಹಿಂದಿರುವಾಗ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಪ್ರವೇಶ ಪತ್ರವನ್ನು ತೋರಿಸಿ, […]

ಕೇರಳದಲ್ಲಿ 2ನೇ ಮಂಕಿ ಪಾಕ್ಸ್ ಪ್ರಕರಣ: ಸಹ ಪ್ರಯಾಣಿಕರ ಐಸೋಲೆಷನ್

ಮಂಗಳೂರು, ಜು.19- ಕೇರಳದಲ್ಲಿ ಪತ್ತೆಯಾದ ಎರಡನೇ ಮಂಕಿಪಾಕ್ಸ್ ಸೋಂಕಿತ ವ್ಯಕ್ತಿ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಆತನೊಂದಿಗೆ ಪ್ರಯಾಣಿಸಿದ್ದವರನ್ನು ಐಸೋಲೆಷನ್‍ಗೆ ಒಳಪಡಿಸಲಾಗಿದೆ. ಜುಲೈ 13ರಂದು ದುಬೈನಿಂದ ಮಂಗಳೂರಿಗೆ ಪ್ರಯಾಣಿಸಿದ್ದ 31 ವರ್ಷದ ವ್ಯಕ್ತಿಯೊಂದಿಗೆ ವಿಮಾನದಲ್ಲಿ 191 ಮಂದಿ ಸಹ ಪ್ರಯಾಣಿಕರಿದ್ದರು. ಅವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 15, ಉಡುಪಿ ಜಿಲ್ಲೆಯ 6, ಕಾಸರಗೋಡು ಭಾಗದ 13, ಕಣ್ಣೂರು ಪ್ರದೇಶದ ಒಬ್ಬ ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ. ಯಾರಿಗಾದರೂ ರೋಗ ಲಕ್ಷಣಗಳಿದ್ದರೆ ತಕ್ಷಣವೇ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಲಾಗಿದೆ. […]