ರಿಯಲ್ ಎಸ್ಟೇಟ್ ಉದ್ಯಮಿಗಳ 1,300 ಕೋಟಿ ಅಕ್ರಮ ಸಂಪತ್ತು ಪತ್ತೆ

ಬೆಂಗಳೂರು,ನ.18- ಕರ್ನಾಟಕ ಮೂಲದ ರಿಯಲ್ ಎಸ್ಟೇಟ್ ಡೆವಲಪರ್‍ಗಳೊಂದಿಗೆ ಜಂಟಿ ಅಭಿವೃದ್ಧಿ ಒಪ್ಪಂದಗಳನ್ನು ಮಾಡಿಕೊಂಡಿರುವ ಕೆಲವು ವ್ಯಕ್ತಿಗಳ ವಿರುದ್ಧ ಆದಾಯ ತೆರಿಗೆ ಇಲಾಖೆಯು ಶೋಧ ನಡೆಸಿದ್ದು, 1,300 ಕೋಟಿಗೂ ಹೆಚ್ಚು ಮೌಲ್ಯದ ಲೆಕ್ಕವಿಲ್ಲದ ಕಪ್ಪು ಹಣ ಪತ್ತೆ ಮಾಡಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ. ಅಕ್ಟೋಬರ್ 20 ಮತ್ತು ನವೆಂಬರ್ 2ರಂದು ಬೆಂಗಳೂರು, ಮುಂಬೈ ಹಾಗೂ ಗೋವಾದಲ್ಲಿ ಸುಮಾರು 50 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಸಲಾಗಿತ್ತು. ಅ.20ರಿಂದ ಇದುವರೆಗೆ ನಡೆದ ಶೋಧ ಕಾರ್ಯಗಳಲ್ಲಿ ಬರೋಬ್ಬರಿ 1,300 ಕೋಟಿ […]

ಮತ್ತೆ ಪಾಕ್ ಗಡಿಯಿಂದ ಹಾರಿ ಬಂದ ಡ್ರೋಣ್

ಚಂಡೀಗಢ, ಅ.4- ಪಂಜಾಬ್‍ನ ಗುರುದಾಸ್‍ಪುರ ಸೆಕ್ಟರ್‍ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಕಡೆಯಿಂದ ಹಾರಿ ಬಂದ ಡ್ರೋಣ್ ಮೇಲೆ ಬಿಎಸ್‍ಎಫ್ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಪಡೆಗಳು ಗಡಿಭಾಗದಲ್ಲಿ ಝೇಂಕರಿಸುವ ಶಬ್ದವನ್ನು ಕೇಳಿ, ಗಮನಿಸಿದಾಗ ಹಾರುತ್ತಿರುವ ವಸ್ತು ಕಂಡು ಬಂದಿದೆ. ತಕ್ಷಣವೇ ಎಚ್ಚೆತ್ತುಕೊಂಡು ಗುಂಡು ಹಾರಿಸಿದ್ದಾರೆ. ದ್ರೋಣ್‍ನಿಂದ ಭಾರತೀಯ ಭೂಪ್ರದೇಶದಲ್ಲಿ ಯಾವುದಾದರೂ ವಸ್ತುಗಳನ್ನು ಚೆಲ್ಲಲಾಗಿದೆಯೇ ಎಂದು ಪರಿಶೀಲಿಸಲಾಗುತ್ತಿದೆ. ಅಧಿಕಾರಿಗಳು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಭಾರತೀಯ ವಿಮಾನಯಾನ ಅತ್ಯಂತ ಸುರಕ್ಷಿತ : ಡಿಜಿಸಿಎ

ನವದೆಹಲಿ,ಜು.31- ಭಾರತೀಯ ವಿಮಾನಯಾನ ಸೇವೆ ಅತ್ಯಂತ ಸುರಕ್ಷಿತವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ರಕ್ಷಣಾ ಗುಣಮಟ್ಟವನ್ನು ಪಾಲನೆ ಮಾಡಲಾಗುತ್ತಿದೆ ಎಂದು ಡಿಜಿಸಿಎ ಮುಖ್ಯಸ್ಥ ಅರುಣ್‍ಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 15 ದಿನಗಳಲ್ಲಿ 15 ಸಣ್ಣ ಪ್ರಮಾಣದ ತಾಂತ್ರಿಕ ಸಮಸ್ಯೆಗಳು ಕಂಡುಬಂದಿವೆ. ಆದರೆ ಇವಾವೂ ದೊಡ್ಡ ಸಮಸ್ಯೆಗಳಲ್ಲ. ಭಾರತೀಯ ವಿಮಾನಯಾನ ಸೇವಾ ವ್ಯವಸ್ಥೆ ಅಂತಾರಾಷ್ಟ್ರೀಯ ಗುಣಮಟ್ಟದ ಖಾತ್ರಿಯನ್ನು ಹೊಂದಿದೆ ಎಂದಿದ್ದಾರೆ. ಕೊರೊನಾ ನಂತರ ಸುಮಾರು 6 ಸಾವಿರ ಕಾರ್ಯಾಚರಣೆಗಳು ನಡೆದಿವೆ. ಕೆಲವು ವೇಳೆ ಒತ್ತಡದ ಸಂದರ್ಭದಲ್ಲಿ ಅದು 7 […]