ಸಿಕಂದ್ರಬಾದ್‍ನಲ್ಲಿ ಧಗಧಗಿಸಿದ ಇ-ಬೈಕ್ ಶೋ ರೂಂ, 8 ಮಂದಿ ಸಾವು

ಸಿಕಂದ್ರಬಾದ್, ಸೆ.13- ತೆಲಂಗಾಣದ ಸಿಕಂದ್ರಬಾದ್‍ನಲ್ಲಿ ಇ-ಬೈಕ್ ಶೋ ರೂಂನಲ್ಲಿ ಬೆಂಕಿ ಅನಾವುತ ಸಂಭವಿಸಿದ್ದು, ಕನಿಷ್ಠ ಎಂಟು ಮಂದಿ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಪಾಸ್‍ಪೋಟ್ ಕಚೇರಿ ಸಮೀಪ ಇರುವ ಇ-ಬೈಕ್ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ರಮೇಣ ಅಗ್ನಿಯ ಕೆನ್ನಾಲಿಗೆಗಳು ಶೋ ರೂಂ ಮೇಲಿನ ಮಹಡಿಯಲ್ಲಿರುವ ಲಾಡ್ಜ್ ಮತ್ತು ರೆಸ್ಟೋರೆಂಟ್‍ಗೂ ವ್ಯಾಪಿಸಿದೆ. ಹೋಟೆಲ್‍ನ ಸಿಬ್ಬಂದಿಗಳು ಮತ್ತು ಅತಿಥಿಗಳು ಬೆಂಕಿ ಮತ್ತು ಹೊಗೆಯನ್ನು ಕಂಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. […]