ಶ್ರೀ ಸಿದ್ದೇಶ್ವರರ ಅಂತಿಮ ದರ್ಶನಕ್ಕೆ ಹರಿದುಬಂದ ಭಕ್ತಸಾಗರ

ವಿಜಯಪುರ,ಜ.3- ಜ್ಞಾನಯೋಗಾನಂದ ಆಶ್ರಮಕ್ಕೆ ಹರಿದು ಬಂದ ಭಕ್ತ ಕೋಟಿ. ಮುಗಿಲು ಮುಟ್ಟಿದ ಆಕ್ರಂಧನ, ಓಂ ನಮಃ ಶಿವಾಯದ ಮಂತ್ರ ಪಠಣ, ಶ್ರೀಗಳ ಅಂತಿಮ ದರ್ಶನ ಪಡೆಯಲು ರಾಜ್ಯ ಹಾಗೂ ದೇಶದ ವಿವಿಧೆಡೆಯಿಂದ ಭಾರೀ ಸಂಖ್ಯೆಯಲ್ಲಿ ಆಗಮಿಸಿದ ಭಕ್ತ ಸಮೂಹ, ಆಶ್ರಮದ ಆವರಣದಲ್ಲಿ ಎಲ್ಲೆಲ್ಲೂ ಶೋಕಸಾಗರ. ಲಿಂಗೈಕ್ಯರಾದ ಜ್ಞಾನಯೋಗಿ ಖ್ಯಾತ ಪ್ರವಚನಕಾರರು, ಶತಮಾನದ ಸಂತ, 2ನೇ ವಿವೇಕಾನಂದರು ಎಂದೇ ಪ್ರಸಿದ್ದರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನರು ಸಾಗರೋಪಾದಿಯಲ್ಲಿ ಹರಿದುಬಂದರು. ರಾಜ್ಯದಿಂದಷ್ಟೇ ಅಲ್ಲ […]