ಅಖಾಡಕ್ಕಿಳಿದ ಚುನಾವಣಾ ಆಯೋಗ, ಆಮಿಷವೊಡ್ಡುವವರ ತೀವ್ರ ನಿಗಾ

ಬೆಂಗಳೂರು,ಮಾ.19- ಯಾವುದೇ ಕ್ಷಣದಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ನಿಚ್ಚಳವಾಗಿರುವುದರಿಂದ ರಾಜ್ಯ ಚುನಾವಣಾ ಆಯೋಗವು ಮತದಾರರಿಗೆ ಆಮಿಷವೊಡ್ಡುವವ ಮೇಲೆ ಹದ್ದಿನ ಕಣ್ಣಿಟ್ಟಿದೆ. ಮೂಲಗಳ ಪ್ರಕಾರ ಈ ತಿಂಗಳ ಅಂತ್ಯಕ್ಕೆ ಕೇಂದ್ರ ಚುನಾವಣಾ ಆಯೋಗವು ಕರ್ನಾಟಕದ 16ನೇ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಪ್ರಕಟಿಸಲಿದ್ದು, ಮೇ 2ನೇ ವಾರದ ಅಂತ್ಯಕ್ಕೆ ಮತದಾನ ನಡೆದು ಮೂರನೇ ವಾರದಲ್ಲಿ ಇಡೀ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇದೀಗ ಚುನಾವಣಾ ಆಯೋಗವು ಕೇಂದ್ರ ಆಯೋಗದ ನಿರ್ದೇಶನದಂತೆ ಅಗತ್ಯ […]