ಆತ್ಮನಿರ್ಭರ್ ಭಾರತಕ್ಕೆ ಕೆಲಸ ಮಾಡಲು ವಿಜ್ಞಾನಿಗಳಿಗೆ ಪ್ರಧಾನಿ ಕರೆ

ನವದೆಹಲಿ,ಜ.3- ವಿಜ್ಞಾನ ಸಮೂಹ ದೇಶವನ್ನು ಆತ್ಮ ನಿರ್ಭರ್ ಸ್ವಾವಲಂಬಿ ಭಾರತ ಮಾಡಲು ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಭಾರತೀಯ ವಿಜ್ಞಾನ ಕಾಂಗ್ರೆಸ್ ಅನ್ನು ವೀಡಿಯೊ ಕಾನರೆನ್ಸಿಂಗ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನದ ಅಭಿವೃದ್ಧಿಯು ಭಾರತದ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿರಬೇಕುಮತ್ತು ನಮ್ಮ ವೈಜ್ಞಾನಿಕ ಸಮುದಾಯಕ್ಕೆ ಸೂರ್ತಿಯಾಗಬೇಕು ಎಂದರು. ಭಾರತವು ವಿಶ್ವದ ಜನಸಂಖ್ಯೆಯ ಶೇ.17-18ರಷ್ಟು ಇರುವುದರಿಂದ ಇಂಧನ ಸೇರಿದಂತೆ ಹಲವು ರೀತಿಯ ಬೇಡಿಕೆಗಳು ಹೆಚ್ಚಾಗಲಿವೆ. ವಿಜ್ಞಾನಿಗಳು ದೇಶಕ್ಕೆ […]