ಸೆ.2ರಂದು ಐಎನ್‍ಎಸ್ ವಿಕ್ರಾಂತ್ ನೌಕಾಪಡೆಗೆ ಸೇರ್ಪಡೆ
ನವದೆಹಲಿ,ಆ.25-ದೇಶೀ ನಿರ್ಮಿತ ವಿಮಾನ ಹೊತ್ತೊಯ್ಯಬಲ್ಲ ಐಎನ್‍ಎಸ್ ವಿಕ್ರಾಂತ್ ಯುದ್ಧ ನೌಕೆಯನ್ನು ಸೆ.2ರಂದು ಭಾರತೀಯ ನೌಕಾ ಪಡೆಗೆ ಸೇರ್ಪಡೆಯಾಗಲಿದೆ. ನೌಕಾದಳದ ಉಪಾಧ್ಯಕ್ಷ ಹಾಗೂ ವೈಸ್ ಅಡ್ಮಿರಲ್ ಎಸ್.ಎನ್.ಗ್ರೋಮಡೆ ಅವರು ಇಂದು ಪ್ರತಿಕಾಗೋಷ್ಠಿಯಲ್ಲಿ ದೇಶಿ ನಿರ್ಮಿತ ನೌಕೆಯ ಬಗ್ಗೆ ಮಾಹಿತಿ ನೀಡಿದರು. ಇದು ಮರೆಯಲಾಗದ ಕ್ಷಣಗಳಾಗಿವೆ. ಇಂಡೋ-ಫೆಸಿಫಿಕ್ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸಲು ಐಎನ್‍ಎಸ್ ವಿಕ್ರಾಂತ್ ಪ್ರಮುಖ ಪಾತ್ರ ವಹಿಸಲಿದೆ. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಹಡಗಿನ 4 ಮತ್ತು 5ನೇ ಹಂತದ ಸಮುದ್ರಯಾನ […]
ಸೆ.2ರಂದು ರಾಜ್ಯಕ್ಕೆ ಪ್ರಧಾನಿ ಮೋದಿ
ಬೆಂಗಳೂರು,ಆ.24- ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ (ಎನ್‍ಎಂಪಿಎ) ಸುಮಾರು 1,200 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಸಾಗರಮಾಲದ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಸೆ.2ರಂದು ಮಂಗಳೂರಿಗೆ ಆಗಮಿಸಲಿದ್ದು, ಇನ್ನೆರಡು ದಿನಗಳಲ್ಲಿ ಕಾರ್ಯಕ್ರಮದ ರೂಪರೇಖೆ ಅಂತಿಮಗೊಳ್ಳಲಿದೆ. ಅಂದು ಬೆಳಗ್ಗೆ ಕೊಚ್ಚಿಯಲ್ಲಿ ನಡೆಯುವ ಕಾರ್ಯಕ್ರಮದ ಬಳಿಕ ಸಂಜೆ 3.45ಕ್ಕೆ ಮಂಗಳೂರಿಗೆ ಪ್ರಧಾನಿ ಆಗಮಿಸಲಿದ್ದು, ಎನ್‍ಎಂಪಿಎಗೆ ಭೇಟಿ ನೀಡಿ ಅಲ್ಲಿ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ನೆರವೇರಿಸಲಿದ್ದಾರೆ. ಬಳಿಕ ಸಂಜೆ 5 ಗಂಟೆಗೆ […]