ಸೆ.26 ರಿಂದ ರೈತ ದಸರಾ : ವಿಶ್ವವಿಖ್ಯಾತ ದಸರಾದಲ್ಲಿ ಕೃಷಿಕರಿಗೆ ಆದ್ಯತೆ

ಮೈಸೂರು, ಸೆ.16- ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಸೆ.26ರಿಂದ 30ರ ವರೆಗೆ ತಾಲೂಕು ಮಟ್ಟದಲ್ಲಿ ಹಾಗೂ ಅ. 1ರಿಂದ 3ರ ವರೆಗೆ ಜಿಲ್ಲಾಮಟ್ಟದಲ್ಲಿ ರೈತ ದಸರಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊದಲ ದಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಜೆ.ಕೆ.ಮೈದಾನದವರೆಗೆ ಎತ್ತಿನ ಬಂಡಿಯಲ್ಲಿ ಮೆರವಣಿಗೆ ನಡೆಯಲಿದ್ದು, ಪೂಜಾ ಕುಣಿತ, ಕಂಸಾಳೆ, ಗಾಡಿಗೊಂಬೆ, ನಂದಿಧ್ವಜ, ಡೊಳ್ಳು ಕುಣಿತ, ನಗಾರಿ, ಕರಡಿ ಕುಣಿತ, ಕೊಂಬು ಕಹಳೆಗಳು ಇರಲಿದ್ದು, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಬೆಳಿಗ್ಗೆ […]