ಶೌಚಾಲಯದಲ್ಲೇ ಕಬಡ್ಡಿ ಆಟಗಾರರಿಗೆ ಊಟೋಪಚಾರ : ಕ್ರೀಡಾ ಅಧಿಕಾರಿ ಸಸ್ಪೆಂಡ್

ಉತ್ತರಪ್ರದೇಶ, ಸೆ. 20- ಇತ್ತೀಚೆಗೆ ಕಬಡ್ಡಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಬಂದಿದ್ದ ಕ್ರೀಡಾಪಟುಗಳಿಗೆ ಶೌಚಾಲಯದಲ್ಲೇ ಊಟದ ವ್ಯವಸ್ಥೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕ್ರೀಡಾ ಅಧಿಕಾರಿಯೊಬ್ಬರನ್ನು ಯೋಗಿ ಸರ್ಕಾರ ಅಮಾನತುಗೊಳಿಸಿದೆ. ಉತ್ತರಪ್ರದೇಶದ ಶಹರಾನ್‍ಪುರ್‍ನಲ್ಲಿ ಹಮ್ಮಿಕೊಂಡಿದ್ದ ಅಂಡರ್ 17 ಬಾಲಕಿಯ ಕ್ರೀಡಾಕೂಟದ ವೇಳೆ ಶೌಚಾಲಯದಲ್ಲೇ ಅಡುಗೆ ಮಾಡಿ ಬಡಿಸಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ವಿಡಿಯೋವನ್ನು ವೀಕ್ಷಿಸಿದ ಕ್ರೀಡಾ ಸಚಿವರು ಹಾಗೂ ಅಧಿಕಾರಿಗಳು ಶೌಚಾಲಯದಲ್ಲೇ ಕಬಡ್ಡಿ ಆಟಗಾರ್ತಿ ಯರಿಗೆ ಊಟದ ವ್ಯವಸ್ಥೆ ಮಾಡಿರುವುದು ದುರದೃಷ್ಟದ ಸಂಗತಿಯಾಗಿರುವುದರಿಂದ ಸ್ಥಳೀಯ ಕ್ರೀಡಾ […]