ಸೌದಿ ಪ್ರಜೆಗಳಿಗೆ ಇ-ವೀಸಾ ಸೌಲಭ್ಯ ಮರು ಜಾರಿ ಮಾಡಿದ ಭಾರತ

ರಿಯಾದ್,ಮಾ.11-ಸೌದಿ ಅರೇಬಿಯಾದ ಪ್ರಜೆಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಇ-ವೀಸಾ ಸೌಲಭ್ಯವನ್ನು ಮರುಸ್ಥಾಪಿಸಲಾಗಿದೆ ಎಂದು ಭಾರತ ಘೋಷಿಸಿದೆ. ಇ-ಟೂರಿಸ್ಟ್ ವೀಸಾ, ಇ-ಬಿಸಿನೆಸ್ ವೀಸಾ, ಇ-ಮೆಡಿಕಲ್ ವೀಸಾ, ಈ ಎಲ್ಲಾ ಐದು ಉಪ-ವರ್ಗಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸೌದಿ ಅರೇಬಿಯಾದ ಪ್ರಜೆಗಳಿಗೆ ಇ-ವೀಸಾದ ಸೌಲಭ್ಯವನ್ನು ಪುನಃಸ್ಥಾಪಿಸಲಾಗಿದೆ ಭಾರತದ ರಾಯಭಾರ ಕಚೇರಿ ಟ್ವಿಟ್ ಮಾಡಿದೆ. ಭಾರತವು 2019 ರಲ್ಲಿ ಸೌದಿ ಪ್ರಜೆಗಳಿಗಾಗಿ ಇ-ವೀಸಾ ಸೇವೆಯನ್ನು ಪ್ರಾರಂಭಿಸಿದೆ ಎಂಬುದು ಗಮನಿಸಬೇಕಾದ ಸಂಗತಿ, ಆದಾಗ್ಯೂ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಇದನ್ನು ಅಮಾನತುಗೊಳಿಸಲಾಗಿದೆ, ಆದರೆ […]

ದೀಪಾವಳಿ ವೇಳೆ ಅಗ್ನಿ ಅವಘಡ ತಡೆಯಲು ಮುಂಜಾಗ್ರತಾ ಕ್ರಮಗಳ ಸುತ್ತೋಲೆ

ಬೆಂಗಳೂರು, ಅ.21- ದೀಪಾವಳಿಯ ಸಂದರ್ಭದಲ್ಲಿ ಯಾವುದೇ ಅಗ್ನಿ ಅನಾಹುತಗಳು ಮತ್ತು ದುರ್ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸುತ್ತೋಲೆ ರವಾನಿಸಿದೆ. ಪಟಾಕಿ ಮಾರಾಟ, ದಾಸ್ತಾನು ಮತ್ತು ಬಳಕೆಯ ಸಂದರ್ಭದಲ್ಲಿ ಮಾರ್ಗಸೂಚಿಗಳನ್ನು ಪಾಲಿಸಬೇಕು, ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಎಚ್ಚರಿಸಲಾಗಿದೆ. ಪಟಾಕಿಗಳ ಮಾರಾಟಕ್ಕೆ ಜನನಿಬಿಡ ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ಅವಕಾಶ ನೀಡಬಾರದು. ವಾಹನಗಳ ಸಂಚಾರಕ್ಕೆ ಕಷ್ಟವಾಗುವಂತಹ ಕಿರಿದಾದ ರಸ್ತೆಗಳನ್ನು ಹೊಂದಿರುವ ಸ್ಥಳಗಳಲ್ಲಿ ಪಟಾಕಿ ಮಾರಾಟ ಮಳಿಗೆಗಳಿರಬಾರದು. ಖಾಯಂ ಅಂಗಡಿ ಅಥವಾ ಕಟ್ಟಡಗಳಲ್ಲಿ […]

ಆ್ಯಪ್ ಆಧಾರಿತ ಓಲಾ, ಊಬರ್ ಟ್ಯಾಕ್ಸಿಗಳಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ

ಬೆಂಗಳೂರು,ಅ.8- ಲೈಸೆನ್ಸ್ ನೀಡುವಾಗ ಸಾರಿಗೆ ಇಲಾಖೆ ನೀಡಿರುವ ಷರತ್ತು ಉಲ್ಲಂಘಿಸಿರುವ ಓಲಾ-ಊಬರ್ ವಾಹನಗಳನ್ನು ಸೀಜ್ ಮಾಡಲು ಆದೇಶ ನೀಡ ಲಾಗಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯಮ ಉಲ್ಲಂಘಿಸಿ ಪ್ರಯಾಣಿಕರಿಂದ ದುಬಾರಿ ದರ ವಸೂಲಿ ಮಾಡುತ್ತಿರುವ ವಾಹಗಳನ್ನು ಸೀಜ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ದುಬಾರಿ ದರ ವಿಧಿಸುತ್ತಿರುವ ಬಗ್ಗೆ ನೋಟಿಸ್ ನೀಡಲಾಗಿದೆ. ನೋಟಿಸ್‍ಗೆ ಆ ಸಂಸ್ಥೆಗಳಿಂದ ಉತ್ತರ […]