ಮಾ. 19 ರಂದು ಬೆಂಗಳೂರಿನಲ್ಲಿ ಅತಿ ದೊಡ್ಡ ಕೃತಕ ಅಂಗಾಂಗ ಜೋಡಣಾ ಶಿಬಿರ

ಬೆಂಗಳೂರು, ಮಾ, 18: ದೇಶಾದ್ಯಂತ ದಿವ್ಯಾಂಗರು, ವಿಶೇಷ ಚೇತನರು, ಅವಕಾಶ ವಂಚಿತರ ಶ್ರೇಯೋಭಿವೃದ್ಧಿಗಾಗಿ ಭಾರತದಾದ್ಯಂತ 38 ವರ್ಷಗಳಿಂದ ನಿರಂತರವಾಗಿ ಉದಾತ್ತ ಸೇವೆ ಸಲ್ಲಿಸುತ್ತಿರುವ ನಾರಾಯಣ್ ಸೇವಾ ಸಂಸ್ಥಾನ್ ಬೆಂಗಳೂರಿನಲ್ಲಿ ಮಾ. 19 ರಂದು ದೇಶದಲ್ಲಿಯೇ ಅತಿ ದೊಡ್ಡ ಉಚಿತ ಕೃತಕ ಅಂಗಾಂಗ ಜೋಡಣಾ ಶಿಬಿರ ಆಯೋಜಿಸಿದೆ. ಒಂದೇ ದಿನ 593 ಮಂದಿಗೆ ಕೃತಕ ಅಂಗಾಂಗ, ಕ್ಯಾಲಿಪರ್ ಗಳನ್ನು ಜೋಡಿಸಿ ದಿವ್ಯಾಂಗರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಲಾಗುತ್ತಿದೆ ಎಂದು ನಾರಾಯಣ್ ಸೇವಾ ಸಂಸ್ಥಾನ್ ವಕ್ತಾರ ರಜತ್ ಗೌರ್ ಹೇಳಿದ್ದಾರೆ. […]