ಕೇದಾರನಾಥ್ ಬಳಿ ಹೆಲಿಕಾಫ್ಟರ್ ಪತನ, ಇಬ್ಬರು ಪೈಲೆಟ್‍ಗಳು ಸೇರಿ 7 ಮಂದಿ ಸಾವು

ಕೇದಾರ್‍ನಾಥ್,ಅ.18- ಯಾತ್ರಾರ್ಥಿಗಳನ್ನ ಕರೆದೊಯ್ಯುತ್ತಿದ್ದ ಕಣಿವೆ ಪ್ರದೇಶಗದ ಲ್ಲಿ ಹೆಲಿಕಾಫ್ಟರ್ ಪತನಗೊಂಡು ಇಬ್ಬರು ಪೈಲೆಟ್‍ಗಳು ಸೇರಿ 7 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ ಕೇದಾರ್‍ನಾಥ್ ಸಮೀಪದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ಬೆಟ್ಟದ ತಪ್ಪಲಿನ ಪ್ರಪಾತದಲ್ಲಿ ಹೆಲಿಕಾಫ್ಟರ್ ಅವಶೇಷಗಳು ಪತ್ತೆಯಾಗಿದು,್ದ ಅದರಲ್ಲಿದ್ದವರು ಪತನ ಸಂದರ್ಭದಲ್ಲಿ ಸಂಭವಿಸಿದ ಬೆಂಕಿ ಜ್ವಾಲೆಯಲ್ಲಿ ದಹನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹವಾಮಾನ ವೈಫಲ್ಯತೆದಿಂದ ಈ ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ. ಕೇದಾರ್‍ನಾಥ್‍ನಿಂದ ಸುಮಾರು 2ಕಿ.ಮೀ. ದೂರದಲ್ಲಿ ಈ ಅನಾಹುತ ಸಂಭವಿಸಿದೆ. ಘಟನೆ ನಡೆದಾಗ […]

ವರ್ಷದೊಳಗೆ ರಾಜ್ಯದ 7 ಜಿಲ್ಲೆಗಳಲ್ಲಿ ಗಾಂಧಿಭವನ ನಿರ್ಮಾಣ : ಬೊಮ್ಮಾಯಿ

ಬೆಂಗಳೂರು,ಅ.2- ರಾಜ್ಯದ ಏಳು ಜಿಲ್ಲೆಗಳಲ್ಲಿ ಇನ್ನೊಂದು ವರ್ಷದಲ್ಲಿ ಗಾಂಧಿ ಭವನ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಸಂಯುಕ್ತ ಆಶ್ರಯದಲ್ಲಿ ಮಹತ್ವ ಗಾಂಧಿಜಿಯವರ ಜನ್ಮ ದಿನಾಚರಣೆ ಅಂಗವಾಗಿ ಪ್ರಖ್ಯಾತ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಅವರಿಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ರಾಜ್ಯದ 23 ಜಿಲ್ಲೆಗಳಲ್ಲಿ ಈಗಾಗಲೇ ಗಾಂಧಿಭವನವನ್ನು ನಿರ್ಮಾಣ ಮಾಡಲಾಗಿದೆ. ಉಳಿದ 7 ಜಿಲ್ಲೆಗಳಲ್ಲಿ ಇನ್ನೊಂದು […]

ಚಿಕ್ಕಮಗಳೂರು ಪೊಲೀಸರಿಗೆ ಶರಣಾದ ರೌಡಿ ಹಂದಿ ಅಣ್ಣಿ ಹಂತಕರು

ಚಿಕ್ಕಮಗಳೂರು, ಜು.20- ರೌಡಿ ಹಂದಿ ಅಣ್ಣಿ ಹತ್ಯೆ ಪ್ರಕರಣದ 8 ಮಂದಿ ಶಂಕಿತ ಆರೋಪಿಗಳು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಕಚೇರಿಗೆ ಬಂದು ಶರಣಾಗಿದ್ದಾರೆ. ಶಿವಮೊಗ್ಗದ ವಿನೋಬಾ ನಗರದ ಕಾರ್ತಿಕ್ ಆಲಿಯಾಸ್ ಕಡಾ ಕಾರ್ತಿಕ್ (33), ಫಾರೂಕ್ (40), ಹರಿಹರ ತಾಲೂಕು ಮಲೆಬೆನ್ನೂರಿನ ಆಂಜನೇಯ ಅಲಿಯಾಸ್ ಅಂಜನಿ (26), ಮಧು (27), ಮಧುಸೂದನ್ ಅಲಿಯಾಸ್ ಕರಿಯ (32), ಚೌಡೇಶ್ವರಿ ಕಾಲೋನಿಯ ಮದನ್ (25), ಕಡೂರಿನ ನಿತಿನ್ ಅಲಿಯಾಸ್ ಭಜರಂಗಿ ಭಾಯಿ (29), ಹುಳ ಗಟ್ಟಿಯ ಚಂದನ್ (22) ಶರಣದವರು. […]

7 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು,ಜು.19- ಸರ್ಕಾರ ಏಳು ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ.ವರ್ಗಾವಣೆಗೊಂಡ ಅಕಾರಿಗಳು:ಬಿಬಿಎಂಪಿ (ಹಣಕಾಸು) ವಿಶೇಷ ಆಯುಕ್ತರಾಗಿದ್ದ ತುಳಸಿ ಮದ್ದಿನೇನಿ ಅವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿಯೂ, ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಾಜೇಂದ್ರ ಚೋಳನ್ ಅವರನ್ನು ಬೆಂಗಳೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ಎಂಡಿಯಾಗಿಯೂ ಹಾಗೂ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ್ ಬೀಳಗಿ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಸುಂದರೇಶ್ ಬಾಬು ಕೊಪ್ಪಳ ಡಿಸಿಯಾಗಿದ್ದಾರೆ. ಬೆಂಗಳೂರು ನಗರ ಡಿಸಿಯಾಗಿ ಶ್ರೀ ನಿವಾಸ್.ಕೆ ನಿಯೋಜನೆಗೊಂಡಿದ್ದಾರೆ. ನಾಗರಾಜ್ ಎನ್.ಎಂ ಚಿಕ್ಕಬಳ್ಳಾಪುರದ ಡಿಸಿಯಾಗಿಯೂ, ರಾಹುಲ್ ರತ್ನಂ ಪಾಂಡೆ […]