ಚಾಲಕನಿಗೆ ಹೃದಯಘಾತವಾಗಿ ಕಾರಿಗೆ ಗುದ್ದಿದ ಬಸ್‍, ಒಂಬತ್ತು ಮಂದಿ ಸಾವು

ನವದೆಹಲಿ,ಡಿ.31- ಬಸ್ ಮತ್ತು ಎಸ್‍ಯುವಿ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಗುಜರಾತ್‍ನಲ್ಲಿ ನಡೆದಿದೆ. ಸೂರತ್‍ನಿಂದ ವಲ್ಸಾದ್‍ಗೆ ಸಂಚರಿಸುತ್ತಿದ್ದ ಐಷಾರಾಮಿ ಬಸ್ ಚಾಲಕನಿಗೆ ಹೃದಯಘಾತವಾದ ಪರಿಣಾಮ ಬಸ್ ಕಾರಿಗೆ ಅಪ್ಪಳಿಸಿದ್ದರಿಂದ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಜರಾತ್‍ನ ನವಸಾರಿ ಜಿಲ್ಲೆಯಲ್ಲಿ ಇಂದು ಈ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 28ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸೂರತ್‍ನಲ್ಲಿ ನಡೆಯುತ್ತಿದ್ದ ಪ್ರಮುಖ್ ಸ್ವಾಮಿ ಮಹಾರಾಜ್ ಶತಾಬ್ದಿ ಮಹೋತ್ಸವ […]