ವರ್ಜೀನಿಯಾದಲ್ಲಿ ಸಾಮೂಹಿಕ ಹತ್ಯಾಕಾಂಡ : ಕನಿಷ್ಠ 10 ಜನರ ಸಾವಿನ ಶಂಕೆ

ವರ್ಜೀನಿಯಾ,ನ.23- ಅಮೆರಿಕದ ವರ್ಜೀನಿಯಾದ ವಾಲ್ಮಾರ್ಟ್ ಮಳಿಗೆಯೊಂದರಲ್ಲಿ ಮತ್ತೊಂದು ಸಾಮೂಹಿಕ ಹತ್ಯಾಕಾಂಡ ನಡೆದಿದ್ದು, ಕನಿಷ್ಠ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ದುರ್ಘಟನೆ ವರದಿಯಾಗಿದೆ. ವರ್ಜೀನಿಯಾದ ಚಸ್ಪಿಕೆಯ ಶಾಮ್ಸರ್ಕಲ್ನಲ್ಲಿರುವ ವಾಲ್ಮಾರ್ಟ್ ಡಿಪಾರ್ಟ್ಮೆಂಟ್ ಸ್ಟೋರ್ನಲ್ಲಿ ಗುಂಡಿನ ದಾಳಿಯಾಗಿರುವ ಸನ್ನಿವೇಶಗಳನ್ನು ಖಚಿತಪಡಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಹಲವಾರು ಮಂದಿ ಜೀವ ಕಳೆದುಕೊಂಡಿರುವುದು ಖಚಿತವಾಗಿದೆ. ಕನಿಷ್ಠ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಮಾಹಿತಿ ಇದೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ಚೆಸ್ಪಿಕೆಯ ಪೊಲೀಸರು ಘಟನೆಯನ್ನು ಖಚಿತಪಡಿಸಿದ್ದು, ದಾಳಿ ನಡೆಸಿದವರು ಕೂಡ ಸಾವನ್ನಪ್ಪಿದ್ದಾರೆ […]

ಸರಣಿ ಅಪಘಾತ: 38 ಮಂದಿಗೆ ಗಾಯ, 40 ವಾಹನಗಳು ಜಖಂ

ಪುಣೆ,ನ.21- ಸರಣಿ ಅಪಘಾತ ಸಂಭವಿಸಿ ಸುಮಾರು 48 ವಾಹನಗಳು ಜಖಂಗೊಂಡು 30 ಮಂದಿ ಗಾಯಗೊಂಡಿರುವ ಘಟನೆ ಮುಂಬೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನವಿಲೆ ಸೇತುವೆ ಬಳಿ ಸಂಭವಿಸಿದೆ. ನಿನ್ನೆ ರಾತ್ರಿ ಪುಣೆ ಮಾರ್ಗವಾಗಿ ತೆರಳುತ್ತಿದ್ದ ಟ್ರಕ್‍ವೊಂದು ಬ್ರೇಕ್ ವೈಫಲ್ಯದಿಂದ ಈ ಸರಣಿ ಅಪಘಾತ ಸಂಭವಿಸಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪುಣೆ ಮೆಟ್ರೊ ಪಾಲಿಟಿನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಕ್ಷಣಾ ತಂಡ ತೆರಳಿ ಕಾರ್ಯಾಚರಣೆ ನಡೆಸಿ ವಾಹನಗಳನ್ನು ತೆರವುಗೊಳಿಸಿ ಗಾಯಾಳುಗಳನ್ನು ಆಸ್ಪತ್ರೆಗೆ […]

ಮಾಜಿ ಸಿಎಂ ಸೇರಿ ಮಹಾರಾಷ್ಟ್ರ ರಾಜಕೀಯ ಮುಖಂಡರ Z+ ಭದ್ರತೆ ಕಡಿತ

ಮುಂಬೈ, ಅ.29- ಮಹಾರಾಷ್ಟ್ರದಲ್ಲಿ ಕೆಲವು ರಾಜಕೀಯ ಪಕ್ಷಗಳ ಮುಖಂಡರುಗಳಿಗೆ ನೀಡಲಾಗಿದ್ದ ಪೊಲೀಸ್ ಭದ್ರತೆಯನ್ನು ಕಡಿತಗೊಳಿಸಲಾಗಿದೆ. ಅದರಲ್ಲೂ ಕಾಂಗ್ರೆಸ್, ಎನ್‍ಸಿಪಿ ಹಾಗೂ ಉದ್ದವ್ ಠಾಕ್ರೆ ಬಣದ ಹಲವಾರು ಹಿರಿಯ ನಾಯಕರುಗಳಿಗೆ ನೀಡಲಾಗಿದ್ದ ಭದ್ರತೆಯನ್ನು ಶಿಂಧೆ ಸರ್ಕಾರ ಕಡಿತಗೊಳಿಸಿದೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಪಕ್ಷ ಮತ್ತು ಉದ್ಧವ್ ಠಾಕ್ರೆ ಬಣದ ಹಲವು ಹಿರಿಯ ನಾಯಕರ ಭದ್ರತೆಗೆ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಯನ್ನು ಶಿಂಧೆ-ಫಡ್ನವೀಸ್ ಸರ್ಕಾರ ತೆಗೆದುಹಾಕಿದೆ. ಎನ್‍ಸಿಪಿ ನಾಯಕರಾದ ಅಜಿತ್ ಪವಾರ್ ಮತ್ತು ದಿಲೀಪ್ ವಾಲ್ಸೆ ಪಾಟೀಲ್ ಅವರ ಭದ್ರತೆಯನ್ನು […]

ಹೊತ್ತಿಉರಿದ ಐಷಾರಾಮಿ ಬಸ್, 11 ಪ್ರಯಾಣಿಕರು ಸಜೀವ ದಹನ

ಮುಂಬೈ,ಅ.8- ಐಷರಾಮಿ ಬಸ್ಸೊಂದು ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮಗು ಸೇರಿದಂತೆ 11 ಮಂದಿ ದುರಂತ ಸಾವಿಗೀಡಾಗಿದ್ದು, 38 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್-ಔರಂಗಾಬಾದ್ ಹೆದ್ದಾರಿಯಲ್ಲಿ ಇಂದು ನಸುಕಿನಜಾವ ಸಂಭವಿಸಿದೆ. ಯವತ್ಮಾಲ್‍ನಿಂದ ಮುಂಬೈಗೆ ತೆರಳುತ್ತಿದ್ದ ಬಸ್ ನಾಸಿಕ್‍ನಿಂದ ಪುಣೆಗೆ ಹೋಗುತ್ತಿದ್ದ ಟ್ರಕ್‍ಗೆ ಡಿಕ್ಕಿ ಹೊಡೆದ ಪರಿ ಣಾಮ ಬಸ್‍ನಲ್ಲಿ ಬೆಂಕಿ ಹೊತ್ತಿಕೊಂಡು, ದಟ್ಟ ಹೊಗೆ ಆವರಿಸಿಕೊಂಡಿದೆ. ಪರಿಣಾಮ 11 ಮಂದಿಸ್ಥಳದಲ್ಲೇ ಸಾವನ್ನಪ್ಪಿ 38 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆ ದಾಖಿಸಲಾಗಿದೆ ಎಂದು […]

ಹೀಲಿಯಂ ಟ್ಯಾಂಕ್ ಸ್ಪೋಟ, ಒಬ್ಬ ಬಲಿ

ಚೆನ್ನೈ,ಅ.3- ಮಾರುಕಟ್ಟೆ ಯೊಂದರಲ್ಲಿ ಹೀಲಿಯಂ ಟ್ಯಾಂಕ್ ಸ್ಪೋಟಗೊಂಡು ಓರ್ವ ಮೃತಪಟ್ಟಿದ್ದು ಅನೇಕರು ಗಾಯಗೊಂಡಿರುವ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಮಟ್ಟು ರವಿ ಮೃತಪಟ್ಟಿರುವ ದುರ್ದೈವಿ. ಬಾಲಕ ಸೇರಿದಂತೆ ಇನ್ನು ಹಲವಾರು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಿರುಚ್ಚಿಯ ಕೊಟ್ಟೈ ವಾಸಲ್ ಪ್ರದೇಶ ಜನನಿಬಿಡ ಮಾರುಕಟ್ಟೆ ಸ್ಥಳವಾಗಿದ್ದು, ನಿನ್ನೆ ಭಾನುವಾರದ ರಾತ್ರಿಯಾದ ಕಾರಣ ಜನಸಂದಣಿ ಹೆಚ್ಚಾಗೇ ಇತ್ತು. ಹೀಲಿಯಂ ಟ್ಯಾಂಕ್‍ವೊಂದು ಏಕಾಏಕಿ ಸ್ಪೋಟಗೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಾಲಕ ಸೇರಿದಂತೆ ಹಲವರಿಗೆ ಗಾಯಗೊಂಡಿದ್ದು, ಸ್ಥಳದಲ್ಲಿ ನಿಲ್ಲಿಸಲಾಗಿದ್ದ […]

ಬ್ರೆಕ್ ಫೇಲ್ ಆಗಿ ನದಿಗೆ ನದಿ ಪಾತ್ರಕ್ಕೆ ಉರುಳಿದ ಬಸ್‍, 6 ಯೋಧರು ಸಾವು

ಶ್ರೀನಗರ, ಆ.16- ಅಮರನಾಥ್ ಯಾತ್ರೆಯ ಭದ್ರತಾ ಕೆಲಸ ಮುಗಿಸಿ ಮರಳುತ್ತಿದ್ದ ಇಂಡೋ-ಟಿಬೆಟಿಯನ್ ಗಡಿ ಭದ್ರತಾ ಪಡೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರಿದ್ದ ಬಸ್‍ವೊಂದು ನದಿ ಪಾತ್ರಕ್ಕೆ ಉರುಳಿ ಬಿದ್ದು ಆರು ಮಂದಿ ಯೋಧರು ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಚಂದನವಾರಿಯಿಂದ ಪಾಹಲ್ಗಾಮ್‍ಗೆ ಯೋಧರನ್ನು ಕರೆದೊಯ್ಯುತ್ತಿದ್ದ ಬಸ್ ಚಂದನವಾರಿಯ ಬಳಿ ಮೊರ್ಹ ಫ್ರಿಸ್ಲಾನ್ ತಿರುವಿನಲ್ಲಿ ಬ್ರೆಕ್ ಫೈಲ್ ಆಗಿ ಹಿಡಿತ ತಪ್ಪಿದೆ. ಎತ್ತರದ ಪ್ರದೇಶದಿಂದ ಬಸ್ ಸರಣಿ ಉರುಳುಗಳ ಮೂಲಕ ನದಿ ಪಾತ್ರಕ್ಕೆ […]

ಭಾರೀ ಮಳೆಯಿಂದ ಹೊಲ-ಗದ್ದೆ ಜಲಾವೃತ, ಕಂಗಾಲಾದ ರೈತ

ಬೆಂಗಳೂರು,ಆ.9- ಕರಾವಳಿ, ಮಲೆನಾಡು ಹೊರತುಪಡಿಸಿ ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಮಳೆ ಅಬ್ಬರ ತಗ್ಗಿದೆ. ಆದರೆ ಬಹುತೇಕ ಕೆರೆಕಟ್ಟೆ, ನದಿ, ಜಲಾಶಯಗಳು ಭರ್ತಿಯಾಗಿರುವುದರಿಂದ ನದಿಪಾತ್ರದಲ್ಲಿ ಪ್ರವಾಹ ಉಂಟಾಗಿ, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಚಿಕ್ಕಮಗಳೂರು ಜಿಲ್ಲೆಯ ತುಂಬಳ್ಳಿಪುರದಲ್ಲಿ ಕಾಫಿ ತೋಟ ನಾಶವಾಗಿದೆ. ಕೊಪ್ಪ-ಶೃಂಗೇರಿ ಹೆದ್ದಾರಿಯ ಉಳುಮೆ ಎಂಬಲ್ಲಿ ಬಿರುಕು ಕಾಣಿಸಿಕೊಂಡು ಕುಸಿಯುವ ಭೀತಿ ಎದುರಾಗಿದೆ. ರಾಯಚೂರು, ಕಲಬುರಗಿಯಲ್ಲಿ ಅತಿವೃಷ್ಟಿ ಉಂಟಾಗಿದೆ. ಭದ್ರಾವತಿ ತಾಲ್ಲೂಕಿನ ಕಾಚಿಗೊಂಡನಹಳ್ಳಿಯಲ್ಲಿ ಮನೆ […]

ವ್ಯಾನ್‍ಗೆ ವಿದ್ಯುತ್ ಸ್ಪರ್ಶಿಸಿ 10 ಶಿವಭಕ್ತರ ಸಾವು..!

ಕೋಲ್ಕತ್ತಾ, ಆ.1- ಶಿವಭಕ್ತರನ್ನು ಹೊತ್ತೊಯ್ಯುತ್ತಿದ್ದ ಪಿಕಪ್ ವ್ಯಾನ್‍ಗೆ ವಿದ್ಯತ್ ಸ್ಪರ್ಶಗೊಂಡು 10 ಯಾತ್ರಿಗಳು ಸಾವನ್ನಪ್ಪಿದ್ದು, 19 ಮಂದಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಕೂಚ್ ಬೆಹಾರ್‍ನಲ್ಲಿ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ಎಲ್ಲರನ್ನು ಚಂಗ್ರಬಂಧ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಪೈಕಿ 16 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಜಲ್ಪೈಗುರಿ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದಾರೆ. ವಾಹನದಲ್ಲಿದ್ದ ಡಿಜೆ ಸಿಸ್ಟಂನ ಜನರೇಟರ್‍ನ ವೈರಿಂಗ್‍ನಿಂದ ವಿದ್ಯುಘಾತ ಉಂಟಾಗಿ ಈ ಘಟನೆ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯರಾತ್ರಿ, ಮೇಖ್ಲಿಗಂಜ್ […]