ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ, ಶಾಸಕರ ಸಭೆ ಕರೆಯಲು ಶರವಣ ಆಗ್ರಹ

ಬೆಂಗಳೂರು, ನ.15-ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುಂಡಿ ಮುಚ್ಚಲು ಕೊಟ್ಟಿದ್ದ ಗಡುವು ಇಂದಿಗೆ ಅಂತ್ಯವಾಗಿದ್ದು, ಬೆಂಗಳೂರು ತುಂಬೆಲ್ಲ ಮೃತ್ಯು ಸ್ವರೂಪಿ ಗುಂಡಿ ಗಟಾರಗಳು ರಾಚುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಉಪನಾಯಕ ಟಿ. ಎ. ಶರವಣ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದೊಂದು ಸುಳ್ಳು ಹೇಳುವ ಸರ್ಕಾರ, ಅಪ್ಪಟ ದಪ್ಪ ಚರ್ಮದ ಜನದ್ರೋಹಿ ಪಾಲಿಕೆ ಎಂದು ಅವರು ಪ್ರಕಟಣೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.ನಿಗದಿತ ಗಡುವಿನಲ್ಲಿ ಗುಂಡಿಗಳನ್ನು ಮುಚ್ಚದ ಅಧಿಕಾರಿಗಳ ಪಟ್ಟಿ ಮಾಡಿ ಸಾರ್ವಜನಿಕವಾಗಿ ಬಿಡುಗಡೆ ಮಾಡಿ ಎಂದು […]