ನಾನು ಕ್ಯಿವ್ ನಗರದಲ್ಲಿಯೇ ಇದ್ದೇನೆ, ಎಲ್ಲೂ ಅವಿತುಕೊಂಡಿಲ್ಲ : ಝೆಲೆನ್ಸ್ಕಿ

ಉಕ್ರೇನ್,ಮಾ.8- ರಷ್ಯಾ ಮತ್ತು ಉಕ್ರೇನ್ ನಡುವಿನ ಮಿಲಿಟರಿ ಸಂಘರ್ಷ 13ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ಅಧ್ಯಕ್ಷ ವೋಡ್ಲಿಮಿರ್ ಝೆಲೆನ್ಸ್ಕಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ, ನಾನು ಕ್ಯಿವ್ ನಗರದಲ್ಲಿಯೇ ಇದ್ದೇನೆ. ಎಲ್ಲೂ ಅಡಗಿಕೊಳ್ಳುವುದಿಲ್ಲ, ಯಾರಿಗೂ ಹೆದರುವುದಿಲ್ಲ. ನಮ್ಮ ದೇಶಭಕ್ತಿ ಯುದ್ಧ ಗೆಲ್ಲುತ್ತದೆ ಎಂದು ಹೇಳಿದ್ದಾರೆ. ಈ ಕುರಿತು ತಡರಾತ್ರಿ ತಮ್ಮ ಫೆಸ್‍ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಮಾತನಾಡಿರುವ ಅವರು, ತಮ್ಮ ಕಚೇರಿಯಿಂದ ತಾವಿರುವ ನಗರವನ್ನು ತೋರಿಸಿದ್ದಾರೆ. ಈ ವೇಳೆ ನಾನು ಕ್ಯಿವ್‍ನ ಬಂಕೋವಾ ಸ್ಟ್ರೀಟ್‍ನಲ್ಲಿ ಇದ್ದೇನೆ. ಎಲ್ಲೂ ಅವಿತುಕೊಂಡಿಲ್ಲ. […]