ಬಿಜೆಪಿಗೆ ಕಗ್ಗಂಟಾದ ರೌಡಿ ಶೀಟರ್ ಗಳ ಸೇರ್ಪಡೆ ವಿವಾದ

ಬೆಂಗಳೂರು,ಡಿ.5- ರೌಡಿಗಳ ಜೊತೆಗಿನ ಸಂಪರ್ಕ ವಿವಾದ ಇದೀಗ ರಾಜ್ಯ ಬಿಜೆಪಿ ಪಾಲಿಗೆ ತಲೆನೋವಾಗಿದ್ದು, ನಾಯಕರ ನಡೆಗೆ ಪಕ್ಷದ ಆಂತರಿಕ ವಲಯದಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ರೌಡಿಶೀಟರ್‍ಗಳ ಪಕ್ಷ ಸೇರ್ಪಡೆ ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ವಿವಾದ ಪಕ್ಷಕ್ಕೆ ಹಾನಿ ಉಂಟುಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕೆಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ರೌಡಿ ಶೀಟರ್ ಸೈಲೆಂಟ್ ಸುನೀಲ ಜೊತೆಗೆ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್ ಹಾಗೂ ಶಾಸಕ ಉದಯ್ ಗರುಡಾಚಾರ್ ಚಾಮರಾಜಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದರು. ಮತ್ತೊಂದು ಕಡೆಯಲ್ಲಿ […]

ಶಾಂತಿ ಕದಡಲು ಬಿಜೆಪಿಗೆ ರೌಡಿಶೀಟರ್‍ಗಳೇ ಬೇಕು: ಸಿದ್ದರಾಮಯ್ಯ

ಬೆಂಗಳೂರು, ನ.29- ಶಾಂತಿ ಕದಡಲು ಬಿಜೆಪಿಯವರಿಗೆ ರೌಡಿಶೀಟರ್‍ಗಳೇ ಬೇಕು, ಅದಕ್ಕಾಗಿ ಕ್ರಿಮಿನಲ್‍ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೊತ್ತಿದ್ದು ಗೊತ್ತಿದ್ದು ರೌಡಿಗಳ ಜೊತೆ ವೇದಿಕೆ ಹಂಚಿಕೊಳ್ಳುವುದು ಸರಿಯಲ್ಲ ಎಂದರು. ಸೈಲೆಂಟ್ ಸುನಿಲ್ ಒಬ್ಬ ಕುಖ್ಯಾತ ರೌಡಿ. ಇಬ್ಬರು ಎಂಪಿಗಳು, ಬಿಜೆಪಿ ನಾಯಕರು ಅವನ ಜೊತೆ ಇದ್ದಾರೆ. ಸುನಿಲ್ ಒಬ್ಬ ಸರ್ಚ್ ವಾರೆಂಟ್ ನಲ್ಲಿ ಇರೋ ರೌಡಿ. ಅಂತಹವನ ಜೊತೆ ವೇದಿಕೆ ಹಂಚಿಕೊಳ್ಳುವುದು […]