ಜನನಿಬಿಡ ಪ್ರದೇಶಗಳಲ್ಲಿ 250 ಶೀ ಟಾಯ್ಲೆಟ್‍ಗಳ ನಿರ್ಮಾಣ

ಬೆಂಗಳೂರು,ಫೆ.17- ನಿರ್ಭಯ ಯೋಜನೆಯಡಿ ಜಾರಿಗೊಳಿಸಲು ತೀರ್ಮಾನಿಸಿದರುವ ಸೇಫ್ ಸಿಟಿ ಯೋಜನೆ ಕಾಮಗಾರಿಗೆ 261 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವರಣೆ ನೀಡಿದ್ದಾರೆ. ಸಮಾಜದ ದುರ್ಬಲ ವರ್ಗದವರಲ್ಲಿ ಅದರಲ್ಲೂ ಮಹಿಳೆಯರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ದ ಸೇಫ್ ಸಿಟಿ ಪ್ರಾಜೆಕ್ಟ್ ಅನ್ನು ಸಮರೋಪಾದಿಯಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಈ ಯೋಜನೆಯಡಿ 1640 ಸ್ಥಳಗಳಲ್ಲಿ 4100 ಕ್ಯಾಮರಾಗಳನ್ನು ಈಗಾಗಲೇ ಅಳವಡಿಸಲಾಗಿದೆ. ಈ ಕ್ಯಾಮರಾಗಳನ್ನು ಇಂಟಿಗ್ರೆಟೆಡ್ ಕಂಟ್ರೋಲ್ ಅಂಡ್ ಕಮಾಂಡ್ ಸೆಂಟರ್‍ಗೆ ಸಂಪರ್ಕ ಕಲ್ಪಿಸಿ ಭದ್ರತಾ ಕ್ರಮಗಳ […]