ತುನೀಶಾ ಶರ್ಮಾ ಆತ್ಮಹತ್ಯೆ ಹಿಂದೆ ಲವ್ ಜಿಹಾದ್ಇಲ್ಲ : ಶೇಜಾನ್ ಖಾನ್ ಕುಟುಂಬ

ಮುಂಬೈ,ಜ.2- ನಟಿ ತುನೀಶಾ ಶರ್ಮಾ ಆತ್ಮಹತ್ಯೆ ಪ್ರಕರಣದ ಹಿಂದೆ ಲವ್ ಜಿಹಾದ್ ಷಡ್ಯಂತ್ರವಿದೆ ಎಂಬ ಆರೋಪವನ್ನು ಶೇಜಾನ್ ಖಾನ್ ಕುಟುಂಬದ ಸದಸ್ಯರು ತಳ್ಳಿ ಹಾಕಿದ್ದಾರೆ. ಕಿರುತೆರೆ ನಟಿ ತುನೀಶಾ ಶರ್ಮಾ ಡಿಸೆಂಬರ್ 24ರಂದು ಚಿತ್ರೀಕರಣದ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ತಾಯಿ ವನೀತಾ ನೀಡಿದ ದೂರು ಆಧರಿಸಿ ತುನೀಶಾಳ ಸಹವರ್ತಿ ಶೇಜಾನ್ ಮೊಹಮ್ಮದ್ ಖಾನ್‍ನನ್ನು ಮಹಾರಾಷ್ಟ್ರ ಪಾಲ್ಗರ್ ಜಿಲ್ಲೆಯ ವಲಿವ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆತನ ನ್ಯಾಯಾಂಗ ಬಂಧನದ ಅವ 14 ದಿನಗಳ ಕಾಲ ವಿಸ್ತರಣೆಯಾಗಿದೆ. […]