ಶ್ರೀಶೈಲಂನಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮನವಿ
ಬೆಂಗಳೂರು,ಫೆ.21-ಆಂಧ್ರಪ್ರದೇಶದ ಶ್ರೀ ಕ್ಷೇತ್ರ ಶ್ರೀಶೈಲಂಗೆ ರಾಜ್ಯದಿಂದ ತೆರಳುವ ಭಕ್ತರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ನಿರ್ಮಾಣ ಮಾಡುತ್ತಿರುವ ಕರ್ನಾಟಕ ಭವನಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಸಿಎಂ ಬೊಮ್ಮಾಯಿಗೆ ಮನವಿ ಮಾಡುವುದಾಗಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು ವಿಧಾನಸಭೆಯಲ್ಲಿಂದು ತಿಳಿಸಿದರು. ಶಾಸಕ ಬಸವರಾಜ ಮತ್ತಿಮೋಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಶ್ರೀಶೈಲಂನ ಶ್ರೀ ಬ್ರಹ್ಮಾರಂಭ ಸ್ವಾಮಿ ದೇವಾಲಯದ ಬಳಿ 300*300 ಅಡಿ ಜಾಗದಲ್ಲಿ ಛತ್ರವನ್ನು ನಿರ್ಮಿಸುತ್ತಿದ್ದೇವೆ. ನೆಲಮಹಡಿ ಮತ್ತು ಮೊದಲ ಮಹಡಿಯಲ್ಲಿ ಒಟ್ಟು 16 ಕೊಠಡಿಗಳು, ನೆಲಮಹಡಿಯಲ್ಲಿ 8 […]