ಇಂಗ್ಲೆಂಡ್‍ಗೆ ಅಪಾಯಕಾರಿ ಯುರೇನಿಯಂ ರವಾನೆ:
ಆರೋಪ ತಳ್ಳಿ ಹಾಕಿದ ಪಾಕ್

ಇಸ್ಲಾಮಾಬಾದ್,ಜ.12- ಕಳೆದ ತಿಂಗಳು ಲಂಡನ್‍ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಯುರೇನಿಯಂ ಮಿಶ್ರಿತ ಸರಕುಗಳು ಕರಾಚಿಯಿಂದ ರವಾನೆಯಾಗಿವೆ ಎಂಬ ಬ್ರಿಟಿಷ್ ಮಾಧ್ಯಮಗಳ ವರದಿಗಳನ್ನು ಪಾಕಿಸ್ತಾನ ತಳ್ಳಿ ಹಾಕಿದೆ. ಕಳೆದ ತಿಂಗಳು ಹೀಥ್ರೂ ವಿಮಾನ ನಿಲ್ದಾಣದಲ್ಲಿ ಯುರೇನಿಯಂನಿಂದ ಕಲುಷಿತಗೊಂಡ ಸರಕುಗಳನ್ನು ಗಡಿ ಅಧಿಕಾರಿಗಳು ವಶಪಡಿಸಿಕೊಂಡರು. ನಂತರ ಬ್ರಿಟಿಷ್ ಭಯೋತ್ಪಾದನಾ ನಿಗ್ರಹ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದರು. ಬ್ರಿಟಿಷ್ ಮೂಲದ ಸನ್ ಪತ್ರಿಕೆ ಈ ಕುರಿತು ವರದಿ ಮಾಡಿದ್ದು,ಯುರೇನಿಯಂ ಪಾಕಿಸ್ತಾನದಿಂದ ಬಂದಿದೆ ಎಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ತಾನದ ಉನ್ನತ […]