ಬಾಂಗ್ಲಾ ವಿಮಾನದಲ್ಲಿ ಬಟ್ಟೆ ಬಿಚ್ಚಿ ಬಡಿದಾಡಿಕೊಂಡ ಪ್ರಯಾಣಿಕರು

ಡಾಕಾ,ಜ.10-ವಿಮಾನದಲ್ಲಿ ಪ್ರಯಾಣಿಕರು ತೋರುವ ಅಶಿಸ್ತಿನ ಪ್ರಕರಣಗಳು ಪ್ರತಿನಿತ್ಯ ಸುದ್ದಿ ಮಾಡುತ್ತಿರುವ ಸಂದರ್ಭದಲ್ಲೇ ಬಾಂಗ್ಲಾ ವಿಮಾನದಲ್ಲಿ ಇಬ್ಬರು ಪ್ರಯಾಣಿಕರು ಬಟ್ಟೆ ಬಿಚ್ಚಿ ಬಡಿದಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಬಾಂಗ್ಲಾ ಸರ್ಕಾರಿ ಒಡೆತನದ ವಿಮಾನದಲ್ಲಿ ನಡೆದಿರುವ ಈ ಘಟನೆಯನ್ನು ಬಿಟಾಂಕೊ ಬಿಸ್ವಾಸ್ ಎನ್ನುವವರು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈ ಘಟನೆ ನಡೆದಿದ್ದು ಯಾವಾಗ ಎನ್ನುವ ಮಾಹಿತಿ ಮಾತ್ರ ಹೊರಬಿದ್ದಿಲ್ಲ. ವಿಮಾನದ ಮುಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬ ಇನ್ನೊಬ್ಬ ಪ್ರಯಾಣಿಕನೊಂದಿಗೆ ಮೊದಲ ವಾಗ್ವಾದ ನಡೆಸುತ್ತಿರುವುದು ಕಂಡು ಬರುತ್ತದೆ. ನಂತರ ಇಬ್ಬರು ಪ್ರಯಾಣಿಕರು ಪರಸ್ಪರ […]
ಜೋಡೊ ಯಾತ್ರೆ ಬೆಂಬಲಿಸಲು ಚಳಿಯಲ್ಲೂ ಶರ್ಟ್ ತೆಗೆದು ನೃತ್ಯ

ನವದೆಹಲಿ,ಜ.8- ರಾಹುಲ್‍ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಹರಿಯಾಣ ತಲುಪಿದ್ದು, ದಟ್ಟ ಮಂಜಿನ ನಡುವೆಯೂ ಕಾರ್ಯಕರ್ತರು ಶರ್ಟ್ ತೆಗೆದು ನೃತ್ಯ ಮಾಡುತ್ತಿರುವುದು ಯಾತ್ರೆಗೆ ಮತ್ತಷ್ಟು ಹುರುಪು ತರಿಸಿದೆ.ದಟ್ಟ ಮಂಜಿನ ನಡುವೆಯೂ ಕಾರ್ಯಕರ್ತರು ಶರ್ಟ್ ತೆಗೆದು ಬಸ್ ಮೇಲೆ ನೃತ್ಯ ಪ್ರದರ್ಶನ ಮಾಡುತ್ತಿರುವ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗಿದೆ. ಯಾತ್ರೆಯ ಬ್ಯಾನರ್ ಹಿಡಿದುಕೊಂಡಿರುವ ಯುವಕರ ಗುಂಪೊಂದು ಗುಲಾಬಿ ಪೇಟ ಧರಿಸಿ ಬಸ್‍ಗಳ ಮೇಲೆ ಶರ್ಟ್‍ರಹಿತರಾಗಿ ನೃತ್ಯ ಮಾಡುತ್ತ ಯಾತ್ರೆಯನ್ನು ಹುರಿದುಂಬಿಸುತ್ತಿದ್ದಾರೆ. ಮೈ ಕೊರೆಯುವ ಚಳಿಯಲ್ಲೂ ಇಂತಹ ಸಾಹಸ […]