ಹೆಣ್ಣನ್ನು ಮುಂದಿಟ್ಟುಕೊಂಡು ಹರ್ಷನನ್ನು ಹತ್ಯೆ ಮಾಡಿದರೇ ಕಟುಕರು..?

ಬೆಂಗಳೂರು, ಫೆ.23- ಶಿವಮೊಗ್ಗದಲ್ಲಿ ಬಜರಂಗ ದಳದ ಕಾರ್ಯಕರ್ತ ಹರ್ಷನ ಕೊಲೆ ಮಾಡಲು ಹಲವು ರೀತಿಯ ತಯಾರಿಗಳನ್ನು ಮಾಡಿಕೊಂಡಿದ್ದ ದುಷ್ಕರ್ಮಿಗಳು, ಸಹಾಯ ಕೇಳುವ ನೆಪದಲ್ಲಿ ಹೆಣ್ಣುಮಕ್ಕಳಿಂದ ಕರೆ ಮಾಡಿಸಿದ್ದರೆ ಎಂಬ ಅನುಮಾನಗಳು ಚರ್ಚೆಗೆ ಗ್ರಾಸವಾಗುತ್ತಿವೆ. ತನಿಖೆ ಆರಂಭಿಸಿರುವ ಪೊಲೀಸರು ಎಲ್ಲಾ ರೀತಿಯಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೊಲೆಯಾದ ದಿನ ಹರ್ಷ ಬೈಕ್‍ನಲ್ಲಿ ಹೋಗದೆ, ಮೂವರು ಸ್ನೇಹಿತರ ಜತೆ ನಡೆದುಕೊಂಡು ಹೋಗುತ್ತಿದ್ದ. ಅಮ್ಮಾ ಕಾಂಟೀನ್‍ವರೆಗೂ ಸ್ನೇಹಿತರು ಜತೆಯಲ್ಲೇ ಇದ್ದರು, ಅಲ್ಲಿ ಸ್ನೇಹಿತರಿಗೆ ಬೈಕ್ ಕೀ ಕೊಟ್ಟ ಹರ್ಷ ಯಾಕೋ ಪರಿಸ್ಥಿತಿ […]