ಚೊಚ್ಚಲ ಸ್ಟೀಲ್ ಬ್ರಿಡ್ಜ್ ಗೆ ಆರಂಭದಲ್ಲೇ ಎದುರಾಯ್ತು ಕಂಟಕ

ಬೆಂಗಳೂರು,ಆ.23- ವಾಹನ ಸವಾರರೇ ಎಚ್ಚರ..! ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಶಿವಾನಂದ ವೃತ್ತದ ಬಳಿ ನಿರ್ಮಿಸಲಾಗಿರುವ ಉಕ್ಕಿನ ಸೇತುವೆ ಮೇಲೆ ಹೋಗುವಾಗ ಕೇಳಿಸುತ್ತಿದೆ ಎದೆ ಜಲ್ಲ್ ಎನ್ನುವ ಶಬ್ದ. ಚೊಚ್ಚಲ ಸ್ಟೀಲ್‍ಬ್ರಿಡ್ಜ್‍ಗೆ ಮಹಾ ಕಂಟಕ ಎದುರಾಗಿದ್ದು, ಬಿಬಿಎಂಪಿಯ ಮತ್ತೊಂದು ಮಹಾ ಎಡವಟ್ಟು ಬಯಲಾಗಿದೆ. ಇದಕ್ಕೆ ಆರಂಭದಲ್ಲೇ ಕಳಪೆ ಕಾಮಗಾರಿ ಆರೋಪಗಳು ಕೇಳಿಬರುತ್ತಿದ್ದು, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸ್ಟೀಲ್ ಬ್ರಿಡ್ಜ್ ವಾಹನಗಳ ಓಡಾಟಕ್ಕೆ ಯೋಗ್ಯವೇ? ಎಂಬ ಹಲವಾರು ಪ್ರಶ್ನೆಗಳು ಸವಾರರಲ್ಲಿ ಮೂಡಿದೆ. ಆ.15ರಂದು ಪ್ರಾಯೋಗಿಕವಾಗಿ ವಾಹನಗಳ ಸಂಚಾರಕ್ಕೆ […]