ಬುರ್ಕಿನಾ ಫಾಸೊದ ಅಧ್ಯಕ್ಷರ ಮನೆ ಬಳಿ ಗುಂಡಿನ ಚಕಮಕಿ

ಔಗಡೌಗೌ,(ಪಶ್ಚಮ ಆಫ್ರಿಕಾ) ಜ. 24 ಬುರ್ಕಿನಾ ಫಾಸೊದ ಅಧ್ಯಕ್ಷ ರೋಚ್ ಮಾರ್ಕ್ ಕ್ರಿಶ್ಚಿಯನ್ ಕರ್ಬೋ ಅವರ ಮನೆಯ ಬಳಿ ತಡರಾತ್ರಿ ಗುಂಡಿನ ಚಕಮಕಿ ನಡೆದಿದೆ. ದಂಗೆಕೋರ ಸೈನಿಕರು ಮಿಲಿಟರಿ ನೆಲೆಯನ್ನು ವಶಪಡಿಸಿಕೊಂಡ ನಂತರ ಆತಂಕವನ್ನು ಮತ್ತಷ್ಟು ಹೆಚ್ಚಾಗಿದೆ. ಸೇನಾ ನೆಲೆಯಲ್ಲಿ ಗಂಟೆಗಟ್ಟಲೆ ಗುಂಡಿನ ಚಕಮಕಿ ನಡೆದಿದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜನರಿಗೆ ಭರವಸೆ ನೀಡಲು ಸರ್ಕಾರಿ ಅಧಿಕಾರಿಗಳು ಪ್ರಯತ್ನಿಸಿದ್ದರು. ಆದರೆ ದಿನದ ಅಂತ್ಯದ ವೇಳೆಗೆ, ದಂಗೆಕೋರರನ್ನು ಬೆಂಬಲಿಸುವ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಕರ್ಬೋ ಅವರ ಪಕ್ಷಕ್ಕೆ ಸೇರಿದ […]