ಪ್ರಧಾನಿ ಜೊತೆ ಮಾತನಾಡಲು ಸಂಸದರಿಗೆ ಧೈರ್ಯವೇ ಇಲ್ಲ: ಸಿದ್ದರಾಮಯ್ಯ

ಮೈಸೂರು, ಫೆ.11- ನರೇಂದ್ರ ಮೋದಿಯವರ ಜೊತೆ ಮಾತನಾಡಲು ರಾಜ್ಯದ ಯಾವೊಬ್ಬ ಸಂಸದರಿಗೂ ಧೈರ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು. ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ ಶೇ.75-80ರಷ್ಟು ಕೇಂದ್ರ ಶೇ.20-25ರಷ್ಟು ರಾಜ್ಯ ಕೊಡಬೇಕು. ಆದರೆ ಈಗ ಕೇಂದ್ರ ಶೇ.50ರಷ್ಟು ಮಾತ್ರ ಕೊಡುತ್ತದೆ. ರಾಜ್ಯ ಉಳಿದ ಶೇ.50ರಷ್ಟು ಕೊಡಬೇಕು. ಇದರಿಂದ ಕೇಂದ್ರ ಸರ್ಕಾರದ ನಮ್ಮ ಪಾಲು ಕಡಿಮೆ ಆಗಿದೆ. 2022ನೇ ಇಸವಿ ಜೂನ್ ತಿಂಗಳಿಗೆ ಕಾಂಪನ್‍ಸೇಷನ್ ಕೊಡೋದು ಮುಗಿದು ಹೋಯಿತು. ಸುಮಾರು 20 ಸಾವಿರ […]