ಶತಮಾನದ ಸಂತ, ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ

ವಿಜಯಪುರ : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶತಮಾನದ ಸಂತ, ನಾಡು ಕಂಡ ನಡೆದಾಡುವ ದೇವರು ಜ್ಞಾನ‌ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (82 ) ಅವರು ಸೋಮವಾರ ರಾತ್ರಿ ಲಿಂಗೈಕ್ಯರಾಗಿದ್ದಾರೆ. ತಮ್ಮ ಪ್ರವಚನದ ಮೂಲಕ ದೇಶ – ವಿದೇಶಗಳಲ್ಲಿ ಆಪಾರ ಸಂಖ್ಯೆಯ ಭಕ್ತರನ್ನು ಹೊಂದಿದ್ದ ಸ್ವಾಮೀಜಿ ಅವರು ಬದುಕಲಿ ಎಂದು ಲಕ್ಷಾಂತರ ಭಕ್ತರ ಪೂಜೆ, ಹೋಮ, ಹವನ, ಯಾವುದೂ ಫಲಿಸಲಿಲ್ಲ. ಕೊನೆ ಕ್ಷಣದ ವರೆಗೂ ಅವರನ್ನು ಉಳಿಸಿಕೊಳ್ಳುವ ವೈದ್ಯರ ಪ್ರಯತ್ನ ಕೈಗೂಡಲಿಲ್ಲ.ಸಂಜೆ 6.15 ಕ್ಕೆ ಸಿದ್ದೇಶ್ವರ ಸ್ವಾಮೀಜಿ ಅಸ್ತಂಗತರಾದರು. […]