BREAKING NEWS : ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಇನ್ನಿಲ್ಲ..!

ಮುಂಬೈ, ಫೆ.6- ಭಾರತೀಯ ಗಾನ ಕೋಗಿಲೆ, ಭಾರತ ರತ್ನ ಲತಾ ಮಂಗೇಶ್ಕರ್ (92) ಅವರು ಇಂದು ವಿವಶರಾಗಿದ್ದಾರೆ.ತಮ್ಮ ಸಿರಿಕಂಠದಿಂದ ಭಾರತೀಯ ಚಿತ್ರರಂಗದಲ್ಲಿ 36 ಭಾಷೆಗಳಲ್ಲಿ ಹಾಡಿದ್ದ ಅವರ ಹಾಡು ಸ್ತಬ್ಧಗೊಂಡಿದೆ.ತಮ್ಮ 13ನೆ ವಯಸ್ಸಿನಲ್ಲೇ ಗಾಯನ ಆರಂಭಿಸಿದ್ದ ಲತಾ ಅವರು ಸುಮಾರು ಏಳು ದಶಕಗಳ ಕಾಲ ಭಾರತದ ಮಧುರ ಕಂಠದ ಗಾಯಕಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು. 1929ರ ಸೆಪ್ಟೆಂಬರ್ 28ರಂದು ಮಧ್ಯ ಪ್ರದೇಶದ ಇಂದೋರ್‍ನಲ್ಲಿ ಸಂಗೀತಗಾರ ದೀನನಾಥ್ ಮಂಗೇಶ್ಕರ್ ಮತ್ತು ಸೇವಂತಿ ಮಂಗೇಶ್ಕರ್ ಅವರ ಪುತ್ರಿಯಾಗಿ ಜನಿಸಿದ ಲತಾ […]