ಆಸ್ತಿ ಕಬಳಿಕೆಗೆ ಯತ್ನ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪತಿ ವಿರುದ್ಧ ದೂರು

ಬೆಂಗಳೂರು, ಡಿ.5- ತಮ್ಮ ಸ್ವಾಧೀನದಲ್ಲಿರುವ ಫಾರಂಹೌಸ್‍ಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಪತಿ ಅತಿಕ್ರಮವಾಗಿ ನುಗ್ಗಿ ಆಸ್ತಿ ಕಬಳಿಸಲು ಯತ್ನಿಸಿದ್ದಾರೆ ಎಂದು ಗಾಯಕ ಲಕ್ಕಿ ಆಲಿ ಆರೋಪಿಸಿದ್ದಾರೆ. ನಟ ಹಾಗೂ ಹಾಸ್ಯ ಕಲಾವಿದರಾಗಿದ್ದ ದಿವಂಗತ ಮೊಹಮ್ಮದ್ ಆಲಿ ಅವರ ಪುತ್ರ ಮಸೂದ್ ಮೊಹಮ್ಮದ್ ಆಲಿ ಎಂದು ಹೇಳಲಾದ ಲಕ್ಕಿ ಆಲಿ ಎಂಬ ಗಾಯಕರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸರಣಿ ಟ್ವೀಟ್‍ಗಳ ಮೂಲಕ ದೂರು ನೀಡಿದ್ದಾರೆ. ತುರ್ತು ಕೆಲಸದ ನಿಮಿತ್ತ ನಾನು ದುಬೈಗೆ ಬಂದಿದ್ದೇನೆ. ಬೆಂಗಳೂರಿನ ಯಲಹಂಕದ […]