ನಮ್ಮ ಮೆಟ್ರೋದಲ್ಲಿ ಒಂದೇ ದಿನ 6 ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣ..!

ಬೆಂಗಳೂರು,ಆ.16- ನಿನ್ನೆ ಒಂದೇ ದಿನ ಮೆಟ್ರೋ ರೈಲಿನಲ್ಲಿ 6 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡಿ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನವಾದ ನಿನ್ನೆ ಒಂದೇ ದಿನ ಮೆಟ್ರೋ ರೈಲು ಸಂಚಾರಕ್ಕೆ ಜನಸಾಗರವೇ ಹರಿದುಬಂದಿದೆ. ಪೇಪರ್ ಟಿಕೆಟ್ ಪಡೆದಿರುವ ಪ್ರಯಾಣಿಕರ ಟಿಕೆಟ್ ಕೌಂಟಿಂಗ್ ಇನ್ನು ನಡೆಯುತ್ತಿದ್ದು, ಲೆಕ್ಕಾಚಾರ ಮುಗಿದ ಮೇಲೆ ಪ್ರಯಾಣಿಕರ ಸ್ಪಷ್ಟ ಸಂಖ್ಯೆ ತಿಳಿದುಬರಲಿದೆ. ಮೆಟ್ರೋ ಮೂಲಗಳ ಪ್ರಕಾರ ನಿನ್ನೆ ಒಂದೇ ದಿನ 6 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋ ರೈಲಿನಲ್ಲಿ ಸಂಚರಿಸಿದ್ದಾರೆ […]