ಒಂದೇ ಪ್ರಶ್ನೆಗೆ ಸೀಮಿತವಾದ ಇಂದಿನ ಕಲಾಪ

ಬೆಂಗಳೂರು,ಫೆ.24-ಪ್ರಶ್ನೋತ್ತರ ಕಲಾಪ ಒಂದೇ ಒಂದು ಪ್ರಶ್ನೆಗೆ ಸೀಮಿತವಾದ ಪ್ರಸಂಗ ವಿಧಾನಸಭೆಯಲ್ಲಿಂದು ಜರುಗಿತು. ಕರ್ನಾಟಕ ವಿಧಾನಸಭೆಯ ಹಾಗೂ ಪ್ರಸಕ್ತ ಬಜೆಟ್ ಅವೇಶನದ ಕೊನೆಯ ದಿನವಾದ ಇಂದು ಸದನದಲ್ಲಿ ಸದಸ್ಯರ ಹಾಜರಾತಿ ಕೊರತೆ ಎದ್ದು ಕಾಣುತ್ತಿತ್ತು. ಆಡಳಿತ ಮತ್ತು ಪ್ರತಿಪಕ್ಷ ಕಡೆಗಳ ಸದಸ್ಯರ ಹಾಜರಾತಿ ಕಡಿಮೆ ಇತ್ತು. ನಿಗದಿತ ಸಮಯಕ್ಕಿಂತ ಸುಮಾರು ಅರ್ಧಗಂಟೆಯಷ್ಟು ವಿಳಂಬವಾಗಿ ವಿಧಾಸಭೆ ಸಮಾವೇಶಗೊಂಡಾಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಅವೇಶನದ ಕೊನೆ ದಿನವಾಗಿದೆ ಎಂದು ಪ್ರಕಟಿಸಿ ಪ್ರಶ್ನೋತ್ತರ ಕಲಾಪಕ್ಕೆ ಅನುವು ಮಾಡಿಕೊಟ್ಟರು. ವಿಧಾನಸಭೆಯಲ್ಲಿ ದೇವೇಗೌಡರನ್ನು […]