ಜಗತ್ತಿನ ಅಸ್ಥಿರತೆ ಸರಿಪಡಿಸುವ ಶಕ್ತಿ ಭಾರತಕ್ಕೆ ಇದೆ : ಎಸ್.ಜೈಶಂಕರ್

ವಾಷಿಂಗ್ಟನ್, ಸೆ.29- ಜಗತ್ತಿನಲ್ಲಿ ಆಶಾವಾದಿ ಸನ್ನಿವೇಶ ಇಲ್ಲದಿರುವ ಮತ್ತು ಆತಂಕದ ಸಮಯದಲ್ಲಿ ಭಾರತವು ಪರಿಸ್ಥಿತಿ ಸ್ಥಿರಗೊಳಿಸುವ ಮತ್ತು ಸೇತುವೆಯ ಪಾತ್ರವಹಿಸುತ್ತದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತಿಕ ಆರ್ಥಿಕತೆಯ ಅಪಾಯವನ್ನು ನಿವಾರಿಸುವಲ್ಲಿ ಭಾರತ ಕೊಡುಗೆ ನೀಡಬಹುದು ಮತ್ತು ರಾಜಕೀಯ ಪರಿಭಾಷೆಯಲ್ಲಿ, ಕೆಲವು ರೀತಿಯಲ್ಲಿ ಜಗತ್ತನ್ನು ಅಭಿವೃದ್ದಿ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು. ತುಂಬಾ ಚಿಂತಿತರಾಗಿರುವ ಅಂತರರಾಷ್ಟ್ರೀಯ ಸಮುದಾಯವನ್ನು ನೋಡುತ್ತಿದ್ದೇವೆ. ಬಹಳಷ್ಟು ಕಷ್ಟಕರ ಪರಿಸ್ಥಿತಿಯಲ್ಲಿ ಭಾರತ ಸಂಬಂಧ ಸೇತುವಾಗಿ ಕಾರ್ಯ ನಿರ್ವಹಿಸುವ […]