ಕಳ್ಳಭಟ್ಟಿ ದುರಂತದಲ್ಲೂ ರಾಜಕೀಯ ಕೆಸರೆರೆಚಾಟ

ಪಾಟ್ನಾ,ಡಿ.21-ಬೀಹಾರದ ಕಳ್ಳಭಟ್ಟಿ ದುರಂತ ಪ್ರಕರಣ ಆಡಳಿತಾರೂಢ ಜೆಡಿಯು ಹಾಗೂ ಪ್ರತಿಪಕ್ಷ ಬಿಜೆಪಿ ನಡುವಿನ ವಾಕ್ಸಮರಕ್ಕೆ ವೇದಿಕೆ ಕಲ್ಪಿಸಿದೆ. ನಕಲಿ ಮದ್ಯ ಸೇವನೆ ಮಾಡಿದ ಪ್ರಕರಣದಲ್ಲಿ ಕೇವಲ 38 ಮಂದಿ ಮೃತಪಟ್ಟಿದ್ದಾರೆ ಎಂದು ನಿತೀಶ್ ಸರ್ಕಾರ ಹೇಳಿದ್ದರೆ, ನಕಲಿ ಮದ್ಯ ಸೇವಿಸಿ 100ಕ್ಕೂ ಹೆಚ್ಚು ಅಮಾಯಕರು ಜೀವ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಮಧ್ಯೆ, ಆಡಳಿತಾರೂಢ ಜೆಡಿಯು ಪಕ್ಷದ ಮುಖಂಡರೊಬ್ಬರ ಮನೆಯಲ್ಲಿ ನಕಲಿ ಮದ್ಯದ ಬಾಟಲಿಗಳ ಸಂಗ್ರಹ ಕಂಡು ಬಂದಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಛಾಪ್ರಾದಲ್ಲಿರುವ ಜೆಡಿಯು […]