ಕುರ್ಚಿ ತರಲು ತಡ ಮಾಡಿದ ಕಾರ್ಯಕರ್ತನ ಮೇಲೆಯೇ ಕಲ್ಲೆಸೆದ ಸಚಿವ

ಚೆನ್ನೈ,ಜ.25- ತಿರುವಳ್ಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮಗೆ ಕುರ್ಚಿ ತರಲು ವಿಳಂಬ ಮಾಡಿದ್ದಕ್ಕಾಗಿ ಡಿಎಂಕೆ ಪಕ್ಷದ ಎಸ್‍ಎಂ ನಾಸರ್ ಅವರು ಕಾರ್ಯಕರ್ತರ ಮೇಲೆ ಕಲ್ಲು ಎಸೆದಿರುವ ಘಟನೆ ವೈರಲ್ಲಾಗಿದೆ. ಹಾಲು ಮತ್ತು ಡೈರಿ ಅಭಿವೃದ್ಧಿ ಸಚಿವರಾದ ನಾಸರ್ ನಡೆಯಬೇಕಿದ್ದ ಕಾರ್ಯಕ್ರಮದ ವ್ಯವಸ್ಥೆಗಳನ್ನು ಪರಿಶೀಲಿಸಲು ಬಂದಿದ್ದರು. ಈ ವೇಳೆ ಕಾರ್ಯಕರ್ತರು ಕುರ್ಚಿ ನೀಡಲು ತಡವಾಗಿದ್ದಕ್ಕೆ ಕೋಪಗೊಂಡು ಕಾರ್ಯಕರ್ತರ ಮೇಲೆ ಕಲ್ಲು ಎಸೆದಿದ್ದಾರೆ. ಸ್ಥಳೀಯರು ಸಚಿವರ ಈ ವರ್ತನೆಯನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಚಿವರು ಕಲ್ಲು ಎಸೆದಿರುವ ದೃಶ್ಯ ವೈರಲ್ […]