ದನಗಳ ಕಳ್ಳಸಾಗಣೆ ತಡೆದು 9 ಹಸುಗಳನ್ನು ರಕ್ಷಿಸಿದ ಬಿಜೆಪಿ ಶಾಸಕಿ

ಕೋಲ್ಕತ್ತಾ, ಡಿ.21- ಬಾಂಗ್ಲಾದೇಶಕ್ಕೆ ದನಗಳನ್ನು ಕಳ್ಳಸಾಗಣೆ ಮಾಡುವ ಯತ್ನವನ್ನು ವಿಫಲಗೊಳಿಸಿ ಒಂಬತ್ತು ಹಸುಗಳನ್ನು ರಕ್ಷಿಸಿರುವುದಾಗಿ ಬಿಜೆಪಿ ಶಾಸಕಿ ಅಗ್ನಿಮಿತ್ರ ಪೌಲ್ ಹೇಳಿದ್ದಾರೆ. ಅಸನ್ಸೋಲ್‍ನಿಂದ ಕೋಲ್ಕತ್ತಾಗೆ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಹಸುಗಳನ್ನು ತುಂಬಿದ್ದ ಟ್ರಕ್ ಅನ್ನು ತಡೆದು ನಿಲ್ಲಿಸಿದ್ದಾಗಿ ಪಾಲ್ ಟ್ವೀಟ್ ಮಾಡಿದ್ದಾರೆ. ಹಸುಗಳನ್ನು ತುಂಬಿದ ಟ್ರಕ್ ಅನ್ನು ನಿಲ್ಲಿಸಿ ದಾಖಲೆಗಳನ್ನು ಕೇಳಲಾಯಿತು ಆದರೆ ಯಾವುದೂ ಕಂಡುಬಂದಿಲ್ಲ ಹಸು ಕಳ್ಳಸಾಗಣೆಯು ದಂಧೆ ನಡೆಯುತ್ತಿದೆ, ಕಳ್ಳಸಾಗಣೆಗೆ ಅವಕಾಶ ಮಾಡಿಕೊಡಲು ಪೊಲೀಸರಿಗೆ ಲಂಚ ನೀಡಲಾಗಿದೆ ಎಂದು ಟ್ರಕ್‍ನಲ್ಲಿದ್ದವರು ಹೇಳಿದ್ದರು ಎಂದು […]