ಬೆಂಗಳೂರಿನ ಸೌತ್ ಇಂಡಿಯಾ ಮಾಲ್‍ನಲ್ಲಿ ಭಾರೀ ಅಗ್ನಿ ದುರಂತ

ಬೆಂಗಳೂರು, ಜ.15- ಸಿಲಿಕಾನ್ ಸಿಟಿಯಲ್ಲಿ ಮುಂಜಾನೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಸೌತ್ ಇಂಡಿಯಾ ಮಾಲ್‍ನಲ್ಲಿರುವ ರಿಲಯನ್ಸ್ ಮಳಿಗೆ ಹೊತ್ತಿ ಉರಿದಿದೆ. ಬನ್ನೇರುಘಟ್ಟ ರಸ್ತೆಯ ಅರಕೆರೆ ಸಿಗ್ನಿಲ್ ಬಳಿ ಈ ಮಳಿಗೆ ಇದ್ದು , ಇಂದು ಮುಂಜಾನೆ 3 ಗಂಟೆ ಸುಮಾರಿನಲ್ಲಿ ನೆಲಮಾಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡು ವ್ಯಾಪಕವಾಗಿ ಹರಡಿದೆ. ಸುದ್ದಿ ತಿಳಿದ ತಕ್ಷಣ ಅಗ್ನಿ ಶಾಮಕ ಸಿಬ್ಬಂದಿ 8 ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಸತತ ಏಳೆಂಟು ಗಂಟೆ ಪರಿಶ್ರಮದಿಂದ ಬೆಂಕಿ ನಂದಿಸಲು ಹರಸಾಹಸಪಟ್ಟು ಕೊನೆಗೂ 11 […]