ಯುದ್ಧಕ್ಕೆ ಹೊರಟ ಸಾಮಂತರಿಗೆ ದಂಡನಾಯಕನ ಕೊರತೆ

ಕೇಂದ್ರದಲ್ಲಿ ಸರ್ಕಾರ ಬದಲಾಗಬೇಕು ಎಂಬ ದೊಡ್ಡ ಕೂಗು ದಕ್ಷಿಣ ಭಾರತದಲ್ಲಿ ಎದ್ದಿದೆ, ಆದರೆ ಬದಲಾವಣೆಯಾಗುವುದಾದರೆ ಪರ್ಯಾಯ ನಾಯಕತ್ವ ಯಾರದು ಎಂಬ ವಿಷಯದಲ್ಲಿ ಒಮ್ಮತ ಮೂಡದೆ ಸಂಭವನೀಯ ರಾಜಕೀಯ ಉದಯೋನ್ಮಖ ಶಕ್ತಿ ಮೊಳಕೆಯಲ್ಲೇ ಅಪೌಷ್ಠಿಕತೆಯಿಂದ ಸೊರಗಲಾರಂಭಿಸಿದೆ. ಕಳೆದ ಎರಡು ತಿಂಗಳ ಅಂತರದಲ್ಲಿ ದಕ್ಷಿಣ ಭಾರತದಲ್ಲಿ ನಡೆದ ಎರಡು ಮಹತ್ವದ ಸಭೆಗಳು ದೇಶದ ರಾಜಕೀಯದಲ್ಲಿನ ಬದಲಾವಣೆ ಮುನ್ಸೂಚನೆ ನೀಡಿದವಾದರೂ ಐಕ್ಯತಾ ಕೂಟ ರಚಿಸುವಲ್ಲಿ ವಿಫಲವಾಗಿವೆ. 2004ರಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿಕೂಟ ತಮಿಳುನಾಡು ಮತ್ತು ಪಾಂಡಿಚೇರಿ ಪ್ರದೇಶಗಳಲ್ಲಿ ಸಂಸತ್‍ನ 40 […]