ಜೋಹಾನ್ಸ್‌ಬರ್ಗ್‌ನ ಬಾರ್‌ವೊಂದರಲ್ಲಿ ಗುಂಡಿನ ದಾಳಿ, 14 ಮಂದಿ ಸಾವು..!

ಜೋಹಾನ್ಸ್‍ಬರ್ಗ್,ಜು.10-ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್‍ನ ಸೊಯಿಟೊ ಟೌನ್‍ಶಿಪ್‍ನ ಬಾರ್‍ನಲ್ಲಿ ನಡೆದಿರುವ ಸಾಮೂಹಿಕ ಹತ್ಯಾಕಾಂಡದಲ್ಲಿ 14 ಮಂದಿ ಮೃತಪಟ್ಟಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶನಿವಾರ ಮಧ್ಯರಾತ್ರಿ 12.30ರ ಸುಮಾರಿನಲ್ಲಿ ಈ ಹತ್ಯಾಕಾಂಡ ನಡೆದಿದ್ದು ಪೆÇಲೀಸರ ಪ್ರಾಥಮಿಕ ತನಿಖೆ ಪ್ರಕಾರ ಮಿನಿಬಸ್‍ನಲ್ಲಿ ಬಂದಿಳಿದ ಪುರುಷರ ಗುಂಪು ಅಕ ಕ್ಯಾಲಿಬರ್‍ನ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದೆ. ಇದರಿಂದ ಸ್ಥಳದಲ್ಲೇ 12 ಮಂದಿ ಮೃತಪಟ್ಟಿದ್ದು, ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ. ಪೊಲೀಸರು ಭಾನುವಾರ ಬೆಳಗ್ಗೆ ಶವಗಳನ್ನು ಹೊರತೆಗೆದಿದ್ದಾರೆ. […]