ಗ್ರಾಮೀಣ ವಿದ್ಯಾರ್ಥಿಗಳಿಗೆ ಐಎಎಸ್/ ಕೆಎಎಸ್ ಉಚಿತ ತರಬೇತಿಗೆ
ಮಾಲೂರು, ಸೆ.18- ಬಡವ, ರೈತರ ಹಾಗೂ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಐಎಎಸ್/ ಕೆಎಎಸ್ ಅಧ್ಯಯನ ಮಾಡಲು ನೆರವಾಗುವ ಸನ್ಮಿತ್ರರ ಸಹಕಾರದಿಂದ ಕೋಲಾರದಲ್ಲಿ ಆರಂಭಿಸಲಾಗಿರುವ ಅಕಾಡೆಮಿಯಲ್ಲಿ ಉಚಿತವಾಗಿ ಎಲ್ಲ ಸೌಲಭ್ಯ ಬಳಸಿಕೊಂಡು ಉನ್ನತ ಹುದ್ದೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಕರೆ ನೀಡಿದರು. ತಾಲೂಕು ಒಕ್ಕಲಿಗರ ನೌಕರರ ಸಂಘದ ಹಮ್ಮಿಕೊಂಡಿದ್ದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದ ಅವರು ಅಕಾಡೆಮಿಯಲ್ಲಿ ಅಧ್ಯಯನಕ್ಕೆ ಪೂರಕ ಸಾಮಗ್ರಿ ಒದಗಿಸುವಲ್ಲಿ ನೆರವಾಗುವ ಖ್ಯಾತ […]