ಪ್ರತಿಭಟನೆ ಹೊರಗಿಟ್ಟುಕೊಳ್ಳಿ, ಕಾಂಗ್ರೆಸ್ ನಡೆಗೆ ಸ್ಪೀಕರ್ ಗರಂ

ಬೆಂಗಳೂರು,ಫೆ.18- ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಲು ಸರ್ವ ಸ್ವತಂತ್ರರು. ಅವರಿಗೆ ಯಾವುದೇ ರೀತಿ ಅಡ್ಡಿಪಡಿಸುವುದಿಲ್ಲ. ನೀವು ಸದನದ ಹೊರಗೆ ಪ್ರತಿಭಟನೆ ನಡೆಸಬಹುದು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಿಡಿಕಾರಿದರು. ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾಗ ಅವರು, ಈ ರೀತಿ ಪದೇ ಪದೇ ಸದನದಲ್ಲಿ ಪ್ರತಿಭಟನೆ ನಡೆಸುವುದು ಪಕ್ಷದ ಹಿರಿಯರಿಗೆ ಶೋಭೆ ತರುವುದಿಲ್ಲ. ನಿಮ್ಮ ಈ ವರ್ತನೆಯಿಂದ ಸದಸ್ಯರ ಹಕ್ಕುಗಳು ಮೊಟಕಾಗುತ್ತವೆ. ಅದನ್ನು ರಕ್ಷಣೆ ಮಾಡುವುದು ನನ್ನ ಕರ್ತವ್ಯ. ಕಲಾಪದೊಳಗೆ ಪ್ರತಿಭಟನೆ ಮಾಡುವುದನ್ನು […]