ವಿವಾದಗಳಿಂದ ನಾಯಕತ್ವ ಬೆಳೆಸಿಕೊಳ್ಳುವ ಉದ್ದೇಶ ಸಲ್ಲದು : ಕಾಗೇರಿ

ಬೆಂಗಳೂರು,ಫೆ.23- ಸಮಾಜದ ಸಾಮರಸ್ಯ ಹೆಚ್ಚಿಸುವ ರೀತಿಯಲ್ಲಿ ನಡೆನುಡಿ ಇರಬೇಕೆ ಹೊರತು ವಿವಾದಗಳ ಮಾತುಗಳಿಂದ ನಾಯಕತ್ವ ಬೆಳೆಸಿಕೊಳ್ಳುವ ಉದ್ದೇಶ ಇರಬಾರದು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದ ಒಳ, ಹೊರಗೆ ಆಡುವ ಮಾತುಗಳು, ಭಾವನೆಗಳು ಸಮಾಜದಲ್ಲಿ ಪ್ರೀತಿ ವಿಶ್ವಾಸ ಬೆಳೆಸಲು ಪೂರಕವಾಗಿರಬೇಕು. ಆದರೆ ವಿವಾದಗಳ ಮಾತುಗಳಿಂದಲೇ ನಾಯಕತ್ವ ವೃದ್ದಿಸಿಕೊಳ್ಳುವ ಪ್ರವೃತ್ತಿ ಸರಿಯಲ್ಲ ಎಂದರು. ಸಮಾಜದ ಸಾಮರಸ್ಯ ಕದಡುವಂತೆ ಮಾತನಾಡಿದ ಸಂದರ್ಭದಲ್ಲಿ ಮಾಧ್ಯಮಗಳು ಅದನ್ನು ವೈಭವೀಕರಿಸಬಾರದು. ಸುಸಂಸ್ಕøತ ಜನಜೀವನ ನಿರ್ಮಾಣಕ್ಕೆ ಜನಪ್ರತಿನಿಗಳು ಕೊಡುಗೆ […]