ತಾಯಿ ಶವದೊಂದಿಗೆ 2 ದಿನ ಕಾಲ ಕಳೆದ ಬಾಲಕ

ಬೆಂಗಳೂರು, ಮಾ.2- ಆರೋಗ್ಯದಲ್ಲಿ ಏರುಪೇರಾಗಿ ತಾಯಿ ಮಲಗಿದ್ದಲ್ಲೇ ಮೃತಪಟ್ಟಿದ್ದು, ಇದ್ಯಾವುದೂ ಅರಿಯದ ಬಾಲಕ ಎರಡು ದಿನ ತಾಯಿಯ ಶವದ ಜೊತೆಯಲ್ಲೇ ಕಾಲ ಕಳೆದಿರುವ ಮನಕಲಕುವ ಘಟನೆ ನಗರದಲ್ಲಿ ನಡೆದಿದೆ.ಆರ್‍ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಾ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಹನ್ನೊಂದು ವರ್ಷದ ಮಗ ಸೂರ್ಯ ಜೊತೆ ಅಣ್ಣಮ್ಮ(45) ವಾಸವಾಗಿದ್ದರು. ಒಂದು ವರ್ಷದ ಹಿಂದೆ ಪತಿ ಸಾವನ್ನಪ್ಪಿದ್ದಾರೆ. ತಾಯಿ, ಮಗ ಇಬ್ಬರೇ ವಾಸವಾಗಿದ್ದರು. ಫೆ. 26ರಂದು ಅಣ್ಣಮ್ಮ ಅವರಿಗೆ ಲೋ ಬಿಪಿ ಹಾಗೂ ಸಕ್ಕರೆ ಕಾಯಿಲೆಯಿಂದಾಗಿ […]