ತಕ್ಷಣವೇ ರಷ್ಯಾ-ಉಕ್ರೇನ್ ಉದ್ವಿಗ್ನತೆ ಶಮನಗೊಳಿಸುವಂತೆ ಭಾರತ ಕರೆ

ನವದೆಹಲಿ, ಫೆ.24- ರಷ್ಯಾ ಮತ್ತು ಉಕ್ರೇನ್ ನಡುವೆ ಉಂಟಾಗಿರುವ ಉದ್ವಿಗ್ನತೆಯನ್ನು ತಕ್ಷಣವೇ ಶಮನಗೊಳಿಸಬೇಕೆಂದು ಭಾರತ ಕರೆ ನೀಡಿದೆ.  ಹದಿನೈದು ರಾಷ್ಟ್ರಗಳ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ರಾಯಭಾರಿ ಟಿ.ಎಸ್.ತಿರುಮೂರ್ತಿ ಅವರು ಎರಡು ದಿನಗಳಿಂದ ಭಾರತವು ಈ ಉದ್ವಿಗ್ನತೆ ಶಮನಕ್ಕೆ ಧ್ವನಿ ಎತ್ತುತ್ತಲೇ ಇದೆ ಮತ್ತು ರಾಜತಾಂತ್ರಿಕವಾಗಿ ಒತ್ತು ನೀಡುತ್ತಲೇ ಇದೆ. ಆದರೆ, ಅಂತಾರಾಷ್ಟ್ರೀಯ ಸಮುದಾಯ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮತ್ತು ಉದ್ವಿಗ್ನತೆಯನ್ನು ಕಡಿಮೆಗೊಳಿಸಬೇಕೆಂದು ನಾವು ನೀಡಿದ ಕರೆಯನ್ನು ಯಾರೂ ಕಿವಿಗೆ ಹಾಕಿಕೊಂಡಂತಿಲ್ಲ […]